ಮಂಗಳ ಗ್ರಹದಲ್ಲಿ ಇಳಿಯುವ ಮೊದಲ ವ್ಯಕ್ತಿ ಮಹಿಳೆ: ನಾಸಾ

Update: 2019-03-13 18:02 GMT

ವಾಶಿಂಗ್ಟನ್, ಮಾ. 13: ಮಂಗಳ ಗ್ರಹದಲ್ಲಿ ಇಳಿಯುವ ಮೊದಲ ವ್ಯಕ್ತಿ ಓರ್ವ ಮಹಿಳೆಯಾಗಿರುವ ಸಾಧ್ಯತೆ ಹೆಚ್ಚಾಗಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಆಡಳಿತಾಧಿಕಾರಿ ಜಿಮ್ ಬ್ರೈಡನ್‌ಸ್ಟೈನ್ ಹೇಳಿದ್ದಾರೆ.

‘‘ಇನ್ನು ಮುಂದೆ ಚಂದ್ರನ ನೆಲದಲ್ಲಿ ಇಳಿಯುವ ಮೊದಲ ವ್ಯಕ್ತಿ ಮಹಿಳೆಯಾಗಿರುವ ಸಾಧ್ಯತೆ ಹೆಚ್ಚಾಗಿದೆ. ಮಂಗಳ ಗ್ರಹದಲ್ಲಿ ಇಳಿಯುವ ಮೊದಲ ವ್ಯಕ್ತಿಯೂ ಮಹಿಳೆಯಾಗಿರುವ ಸಾಧ್ಯತೆ ಹೆಚ್ಚಾಗಿದೆ’’ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಕುರಿತ ರೇಡಿಯೊ ಕಾರ್ಯಕ್ರಮ ‘ಸಯನ್ಸ್ ಫ್ರೈಡೇ’ಯಲ್ಲಿ ಬ್ರೈಡನ್‌ಸ್ಟೈನ್ ಹೇಳಿರುವುದಾಗಿ ಸಿಎನ್‌ಎನ್ ಹೇಳಿದೆ.

ಆದಾಗ್ಯೂ, ಆ ಮಹಿಳೆಯರು ಯಾರು ಎಂಬುದನ್ನು ನಿರ್ದಿಷ್ಟವಾಗಿ ಅವರು ಹೇಳಲಿಲ್ಲ. ಆದರೆ, ನಾಸಾದ ಮುಂದಿನ ಯೋಜನೆಗಳಲ್ಲಿ ಮಹಿಳೆಯರೇ ಮುಂದಿದ್ದಾರೆ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News