ರಾಜ್ ಕೋಟ್: ಮೊಬೈಲ್ ಗೇಮ್ 'ಪಬ್ ಜಿ' ನಿಷೇಧ ಉಲ್ಲಂಘಿಸಿದ ಹತ್ತು ಮಂದಿ ಸೆರೆ

Update: 2019-03-14 05:38 GMT

ರಾಜ್ ಕೋಟ್ : ಮೊಬೈಲ್ ಗೇಮ್ ಪಬ್ ಜಿಯನ್ನು ನಿಷೇಧಿಸಿ ರಾಜ್ ಕೋಟ್ ಪೊಲೀಸ್ ಆಯುಕ್ತರು ಮಾ. 6ರಂದು ಅಧಿಸೂಚನೆ ಹೊರಡಿಸಿದ ಒಂದು ವಾರದ ನಂತರ ಪೊಲೀಸರು ಕಳೆದೆರಡು ದಿನಗಳಲ್ಲಿ ಆರು ಮಂದಿ ಪದವಿ ವಿದ್ಯಾರ್ಥಿಗಳೂ ಸೇರಿದಂತೆ ಒಟ್ಟು ಹತ್ತು ಮಂದಿಯನ್ನು ಈ ನಿಷೇಧಿತ ಆಟ ಆಡಿದ್ದಕ್ಕಾಗಿ ಬಂಧಿಸಿದ್ದಾರೆ. 

ಇಲ್ಲಿಯ ತನಕ ಈ ಆಟಕ್ಕೆ ಸಂಬಂಧಿಸಿದಂತೆ ಒಟ್ಟು 12 ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ.

ಬುಧವಾರ ರಾಜ್ ಕೋಟ್ ಪೊಲೀಸ್ ಮುಖ್ಯ ಕಾರ್ಯಾಲಯದ ಸಮೀಪ ಈ ಗೇಮ್ ಆಡುತ್ತಿದ್ದ ಮೂವರು ಯುವಕರನ್ನು ರಾಜ್ ಕೋಟ್ ವಿಶೇಷ ಕಾರ್ಯಾಚರಣೆ ತಂಡ  ಬಂಧಿಸಿತ್ತು. ಬಂಧಿತರ ಮೊಬೈಲ್ ಫೋನ್ ಗಳನ್ನು ಕೂಡ ವಶಪಡಿಸಿಕೊಳ್ಳಲಾಗಿದೆ. ಯುವಕರು ಈ ಗೇಮ್ ಆಡುವುದರಲ್ಲಿ ಅದೆಷ್ಟು ತಲ್ಲೀನರಾಗಿದ್ದರೆಂದರೆ ಅವರಿಗೆ ಪೊಲೀಸರ ತಂಡ ಅವರ ಹತ್ತಿರ ಬರುವ ತನಕವೂ ತಿಳಿದಿರಲಿಲ್ಲ.

ಇದಕ್ಕೂ ಮೊದಲು ಮಂಗಳವಾರ ನಗರದ ಕಾಲವಡ್ ರಸ್ತೆಯಲ್ಲಿರುವ ಕಾಲೇಜಿನ ಹತ್ತಿರದ  ಆಹಾರ ಮಳಿಗೆಗಳಲ್ಲಿ ಕುಳಿತು ಈ ಗೇಮ್ ಆಡುತ್ತಿದ್ದ ಆರು ವಿದ್ಯಾರ್ಥಿಗಳನ್ನು ಬಂಧಿಸಲಾಗಿತ್ತು. ಅಧಿಸೂಚನೆ ಪಾಲಿಸದೇ ಇರುವುದಕ್ಕೆ ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಕೂಡಲೇ ಜಾಮೀನು ದೊರೆಯುತ್ತದೆ. ನಂತರ ಕೋರ್ಟ್ ವಿಚಾರಣೆಯಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News