ವಿಶ್ಲೇಷಣೆಗಾಗಿ ಪತನಗೊಂಡ ವಿಮಾನದ ಬ್ಲ್ಯಾಕ್ ಬಾಕ್ಸ್ ಪ್ಯಾರಿಸ್‌ಗೆ

Update: 2019-03-14 16:17 GMT

ಅಡಿಸ್ ಅಬಾಬ (ಇಥಿಯೋಪಿಯ), ಮಾ. 14: ಇಥಿಯೋಪಿಯ ರಾಜಧಾನಿ ಅಡಿಸ್ ಅಬಾಬದ ಹೊರವಲಯದಲ್ಲಿ ರವಿವಾರ ಪತನಗೊಂಡ ಬೊಯಿಂಗ್ 737 ಮ್ಯಾಕ್ಸ್ 8 ವಿಮಾನದ ಬ್ಲ್ಯಾಕ್ ಬಾಕ್ಸ್ ಫ್ಲೈಟ್ ರೆಕಾರ್ಡರ್‌ಗಳನ್ನು ವಿಶ್ಲೇಷಣೆಗಾಗಿ ಪ್ಯಾರಿಸ್‌ಗೆ ಕಳುಹಿಸಲಾಗಿದೆ ಎಂದು ಇಥಿಯೋಪಿಯನ್ ಏರ್‌ಲೈನ್ಸ್ ಗುರುವಾರ ತಿಳಿಸಿದೆ.

‘‘ಅಪಘಾತ ತನಿಖಾ ಬ್ಯೂರೋ ನೇತೃತ್ವದ ಇಥಿಯೋಪಿಯ ನಿಯೋಗವೊಂದು ಫ್ಲೈಟ್ ಡಾಟಾ ರೆಕಾರ್ಡರ್ (ಎಫ್‌ಡಿಆರ್) ಮತ್ತು ಕಾಕ್‌ಪಿಟ್ ವಾಯ್ಸ ರೆಕಾರ್ಡರ್ (ಸಿವಿಸಿ)ನೊಂದಿಗೆ ತನಿಖೆಗಾಗಿ ಪ್ಯಾರಿಸ್‌ಗೆ ಹೋಗಿದೆ’’ ಎಂದು ಏರ್‌ಲೈನ್ ಟ್ವಿಟರ್‌ನಲ್ಲಿ ಹೇಳಿದೆ.

ಈ ಉಪಕರಣಗಳಲ್ಲಿರುವ ದತ್ತಾಂಶಗಳನ್ನು ವಿಶ್ಲೇಷಿಸಲು ತನ್ನಲ್ಲಿ ಸಲಕರಣೆಗಳಿಲ್ಲ ಎಂದು ಇಥಿಯೋಪಿಯ ಹೇಳಿದೆ. ಅದೇ ವೇಳೆ, ಬೋಯಿಂಗ್ ಬಳಸುವ ಸಾಫ್ಟ್‌ವೇರನ್ನು ಓದಲು ತನಗೆ ಸಾಧ್ಯವಿಲ್ಲ, ಹಾಗಾಗಿ ಈ ಉಪಕರಣಗಳನ್ನು ತಾನು ವಿಶ್ಲೇಷಿಸಲಾರೆ ಎಂಬುದಾಗಿ ಜರ್ಮನಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News