ನ್ಯೂಝಿಲ್ಯಾಂಡ್ ವಿಮಾನ ನಿಲ್ದಾಣದಲ್ಲಿ ಶಂಕಾಸ್ಪದ ಪ್ಯಾಕೇಜ್ ಪತ್ತೆ

Update: 2019-03-17 16:31 GMT

ವೆಲ್ಲಿಂಗ್ಟನ್, ಮಾ.17: ಕ್ರೈಸ್ಟ್‌ಚರ್ಚ್‌ನ ಅವಳಿ ಮಸೀದಿಗಳಲ್ಲಿ ಹತ್ಯಾಕಾಂಡ ನಡೆದ ಬಳಿಕ ನ್ಯೂಝಿಲ್ಯಾಂಡ್‌ನಾದ್ಯಂತ ಭದ್ರತಾ ವ್ಯವಸ್ಥೆ ಬಿಗಿಗೊಂಡಿರುವಂತೆಯೇ ಡ್ಯೂನ್‌ಡಿನ್ ವಿಮಾನನಿಲ್ದಾಣದಲ್ಲಿ ರವಿವಾರ ಸಂಜೆ ಶಂಕಾಸ್ಪದ ರೀತಿಯಲ್ಲಿ ಪ್ಯಾಕೇಜ್ ಒಂದು ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಿಸಿದರು.

ವಿಮಾನ ನಿಲ್ದಾಣದ ಕಟ್ಟಡದ ಹೊರಗೆ ಶಂಕಾಸ್ಪದ ಪ್ಯಾಕೇಜ್ ಪತ್ತೆಯಾಗಿದ್ದು ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆಂದು ಹೇಳಿಕೆಯೊಂದು ತಿಳಿಸಿದೆ. ಕ್ರೈಸ್ಟ್‌ಚರ್ಚ್ ಅವಳಿ ಮಸೀದಿ ಹತ್ಯಾಕಾಂಡ ನಡೆಸಿದ ಉಗ್ರ ಬ್ರಿಂಟನ್ ಟ್ಯಾರಾಂಟ್, ಡ್ಯುನ್‌ಡಿನ್ ನಗರದ ನಿವಾಸಿಯೆನ್ನಲಾಗಿದೆ. ಆಗ್ನೇಯ ನ್ಯೂಝಿಲ್ಯಾಂಡ್‌ನ ನಗರವಾದ ಡ್ಯುನ್‌ಡಿನ್‌ನಲ್ಲಿ ರವಿವಾರ ಸಂಜೆ ಶಂಕಾಸ್ಪದ ವಸ್ತು ಪತ್ತೆಯಾಗಿದ್ದು, ಬೆರಳೆಣಿಕೆಯ ಸಂಖ್ಯೆಯ ವಿಮಾನಗಳಷ್ಟೇ ಅಲ್ಲಿಗೆ ಆಗಮಿಸುವುದರಲ್ಲಿದ್ದವು ಎಂದು ತಿಳಿದುಬಂದಿದೆ.

ಮುಂಜಾಗ್ರತೆಯ ಕ್ರಮವಾಗಿ ನ್ಯೂಝಿಲ್ಯಾಂಡ್ ಪೊಲೀಸರು ವಿಮಾನ ನಿಲ್ದಾಣಕ್ಕೆ ಸಾಗುವ ರಾಜ್ಯಹೆದ್ದಾರಿ 86ನ್ನು ವಾಹನ ಸಂಚಾರಕ್ಕೆ ಮುಚ್ಚುಗಡೆಗೊಳಿಸಿದ್ದಾರೆಂದು ತಿಳಿದುಬಂದಿದೆ.

ಆದಾಗ್ಯೂ ವಿಮಾನನಿಲ್ದಾಣದ ಟರ್ಮಿನಲ್ ಕಟ್ಟಡದಿಂದ ಪ್ರಯಾಣಿಕರನ್ನಾಗಲಿ, ಸಿಬ್ಬಂದಿಯನ್ನಾಗಲಿ ತೆರವುಗೊಳಿಸಿಲ್ಲವೆಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News