ವಿಜಯಪುರ : ನಿಷೇಧಿತ ಪ್ಲಾಸ್ಟಿಕ್ ಅಂಗಡಿ ಮೇಲೆ ಅಧಿಕಾರಿಗಳಿಂದ ದಾಳಿ

Update: 2019-03-20 10:16 GMT

ವಿಜಯಪುರ : ನಿಷೇಧಿತ ಪ್ಲಾಸ್ಟಿಕ್ ಅಂಗಡಿ ಮೇಲೆ ಮಹಾನಗರ ಪಾಲಿಕೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಅಪಾರ ಪ್ರಮಾಣದಲ್ಲಿ ಪ್ಲಾಸ್ಟಿಕ್ ವಶಕ್ಕೆ ಪಡೆದಿದ್ದಾರೆ.

ಸುಮಾರು 2 ಲಕ್ಷ ಮೌಲ್ಯದ 4 ಕ್ವಿಂಟಲ್ ಕ್ಕಿಂತ ಹೆಚ್ಚಿನ ಪ್ಲಾಸ್ಟಿಕ್ ಬ್ಯಾಗ್ಸ್ ಗಳನ್ನು ಅಧಿಕಾರಿಗಳು ವಶಪಡೆಸಿಕೊಂಡಿದ್ದಾರೆ. ಮಹಾನಗರ ಪಾಲಿಕೆ ಪರಿಸರ ಅಭಿಯಂತರ ಜಗದೀಶ ನೇತೃತ್ವದಲ್ಲಿ ವಿಜಯಪುರ ನಗರದ ಕಲಾದಗಿ ಗಲ್ಲಿಯಲ್ಲಿರುವ ಮಹಾರಾಜ ಎಂಬವರಿಗೆ ಸೇರಿದ ಅಂಗಡಿ ಮೇಲೆ ದಾಳಿ ನಡೆಸಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ನಿಷೇಧಿತ ಪ್ಲಾಸ್ಟಿಕ್ ವಶಕ್ಕೆ ಪಡೆದು ಅಂಗಡಿ ಸೀಜ್ ಮಾಡಿದ್ದಾರೆ.

ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಬಳಕೆ ಹಾಗೂ ಉತ್ಪಾದನೆಯನ್ನು ಜಿಲ್ಲಾಡಳಿತ ನಿಷೇಧಗೊಳಿಸಿ ಆದೇಶಿಸಿತ್ತು. ಆದರೂ ವ್ಯಾಪಾರಸ್ಥರು ಅಕ್ರಮವಾಗಿ ಪ್ಲಾಸ್ಟಿಕ್ ಮಾರಾಟ ಮಾಡುತ್ತಲ್ಲೇ ಇದ್ದರು. ಕಳೆದೆರಡು ದಿನಗಳಿಂದ ದೂರು ಬಂದ ಹಿನ್ನೆಲೆ ಪಾಲಿಕೆ ಅಧಿಕಾರಿಗಳು ದಾಳಿ ನಡೆಸುತ್ತಿದ್ದು ಪ್ಲಾಸ್ಟಿಕ್ ವಶಕ್ಕೆ ಪಡೆಯುತ್ತಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News