ಕಳಸಾಪುರ ಮೀಸಲು ಅರಣ್ಯಕ್ಕೆ ಬೆಂಕಿ: 80 ಎಕರೆಗೂ ಹೆಚ್ಚು ಅರಣ್ಯ ಪ್ರದೇಶ ನಾಶ

Update: 2019-03-20 12:46 GMT

ಚಿಕ್ಕಮಗಳೂರು, ಮಾ.20: ತಾಲೂಕಿನ ಕಳಸಾಪುರ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಬೆಂಕಿ ಬಿದ್ದು 80 ಎಕರೆಗೂ ಹೆಚ್ಚು ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿದೆ. 

ಬುಧವಾರ ಸಂಜೆ ವೇಳೆ ಬಿದ್ದ ಬೆಂಕಿ ಬಿಸಿಲ ಬೇಗೆಯೊಂದಿಗೆ ಗಾಳಿಯೂ ಇದ್ದ ಕಾರಣ ಸುತ್ತಲ ಪ್ರದೇಶಗಳಿಗೂ ವಿಸ್ತರಿಸಿದೆ. ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿಯನ್ನು ನಂದಿಸುವ ಕಾರ್ಯವನ್ನು ಆರಂಭಿಸಿದರಾದರೂ ಬೆಂಕಿಯ ಕೆನ್ನಾಲಿಗೆಗೆ 80 ಎಕರೆಗೂ ಹೆಚ್ಚು ಪ್ರದೇಶದಲ್ಲಿದ್ದ ಅತ್ಯಮೂಲ್ಯ ಅರಣ್ಯ ಸಂಪತ್ತು ನಾಶವಾಗಿದೆ ಎಂದು ತಿಳಿದು ಬಂದಿದೆ.

ಬೆಂಕಿಯಿಂದಾಗಿ ಆಲ, ಶ್ರೀಗಂಧ, ನೀಲಗಿರಿ ಮರಗಳು ಸೇರಿದಂತೆ ಔಷಧಯುಕ್ತ ಸಸ್ಯಗಳು ಸುಟ್ಟು ಕರಕಲಾಗಿವೆ. ಅಪರಿಚಿತ ದುಷ್ಕರ್ಮಿಗಳು ಬೀಡಿ, ಸಿಗರೇಟು ಸೇದಿ ಹಾಕಿರುವುದರಿಂದ ಅಥವಾ ಬೇಕೆಂದೇ ಬೆಂಕಿ ಹಾಕಿರಬಹುದು ಎಂದು ಅರಣ್ಯ ಇಲಾಖೆ ಸಿಬ್ಬಂದಿ ಸಂದೇಹ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಟ್ಟು ಬೆಂಕಿಯನ್ನು ಆರಿಸಿ ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News