ಅಮೆರಿಕದ ಮೇಲ್ಮನವಿ ನ್ಯಾಯಾಲಯದ ನ್ಯಾಯಾಧೀಶರಾಗಿ ಭಾರತೀಯ ಸಂಜಾತೆ ನಿಯೋಮಿ ರಾವ್ ಪ್ರಮಾಣ

Update: 2019-03-21 06:12 GMT

ವಾಷಿಂಗ್ಟನ್, ಮಾ.21: ಅಮೆರಿಕದ ಪ್ರತಿಷ್ಠಿತ ಕೊಲಂಬಿಯಾ ಜಿಲ್ಲಾ ಮೇಲ್ಮನವಿ ನ್ಯಾಯಾಲಯದ  ನ್ಯಾಯಾಧೀಶರಾಗಿ ಭಾರತೀಯಸಂಜಾತೆ  ನಿಯೋಮಿ  ರಾವ್  ಪ್ರಮಾಣ ವಚನ ಸ್ವೀಕರಿಸಿ , ಅಧಿಕಾರ ವಹಿಸಿಕೊಂಡಿದ್ದಾರೆ.

 ಯುಎಸ್ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಕ್ಲಾರೆನ್ಸ್ ಥಾಮಸ್ ಅವರು ಶ್ವೇತಭವನದಲ್ಲಿ  ನಿಯೋಮಿ ರಾವ್ ಅವರಿಗೆ  ಮಂಗಳವಾರ ಪ್ರಮಾಣವಚನ ಬೋಧಿಸಿದರು.

ನ್ಯಾಯಮೂರ್ತಿ ಬ್ರೆಟ್ ಕಾವನಾಗ್  ಅವರಿಂದ ತೆರವಾದ ಜಾಗಕ್ಕೆ ನಿಯೋಮಿ ರಾವ್ ನೇಮಕಗೊಂಡಿದ್ದಾರೆ. 45ರ ಹರೆಯದ ನಿಯೋಮಿ ರಾವ್  ಕಳೆದ ನವೆಂಬರ್ ನಲ್ಲಿ ಅಮೆರಿಕದ ಮೇಲ್ಮನವಿ ನ್ಯಾಯಾಧೀಶರಾಗಿ  ನೇಮಕಗೊಂಡಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News