ಆರೋಪಿಗಳ ಖುಲಾಸೆಗೆ ಎನ್‍ಐಎ ಹೊಣೆಗಾರ: ಪ್ರಕರಣ ಬೇಧಿಸಿದ್ದ ಮಾಜಿ ತನಿಖಾಧಿಕಾರಿ

Update: 2019-03-21 10:39 GMT

ಹೊಸದಿಲ್ಲಿ, ಮಾ.21: ಸಂಜೋತಾ ಎಕ್ಸ್ ಪ್ರೆಸ್ ರೈಲು ಸ್ಫೋಟ ಪ್ರಕರಣದಲ್ಲಿ ಆರೋಪಿಗಳು ಖುಲಾಸೆಯಾದ ಸಂಬಂಧ ಪ್ರಕರಣದ ವಿಚಾರಣೆ ಕೈಗೊಂಡ ಎನ್‍ಐಎ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಈ ಪ್ರಕರಣ ಭೇದಿಸಿದ್ದ ಮಾಜಿ ಐಪಿಎಸ್ ಅಧಿಕಾರಿ ವಿಕಾಸ್ ನಾರಾಯಣ ರೈ ಆಗ್ರಹಿಸಿದ್ದಾರೆ..

1977ನೇ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿರುವ ರೈ ನೇತೃತ್ವದ ತಂಡ, ಸ್ಫೋಟದಲ್ಲಿ ಬಳಕೆಯಾದ ಚೀಲವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿತ್ತು. "ಪ್ರಕರಣವನ್ನು ಹೂತುಹಾಕಲು ಇಡೀ ಕಾನೂನು ವ್ಯವಸ್ಥೆ ಪ್ರಯತ್ನಿಸಿದ ಹಿನ್ನೆಲೆಯಲ್ಲಿ ಆರೋಪಿಗಳು ಖುಲಾಸೆಯಾದದ್ದು ಸಹಜ" ಎಂದು ಅವರು ಅಭಿಪ್ರಾಯಪಟ್ಟರು.

ಹರ್ಯಾಣ ಪೊಲೀಸ್ ಇಲಾಖೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಮಹಾನಿರ್ದೇಶಕರಾಗಿದ್ದ ಅವರು ದೂರವಾಣಿ ಮೂಲಕ ಇಂಡಿಯನ್ ಎಕ್ಸ್‍ಪ್ರೆಸ್ ಜೊತೆ ಮಾತನಾಡಿ, ಇಂಥದ್ದೇ ಪ್ರಕರಣಗಳಾದ 2007ರ ಅಜ್ಮೀರ್ ಸ್ಫೋಟ ಪ್ರಕರಣ, ಮೆಕ್ಕಾ ಮಸೀದಿ ಮತ್ತು ಮಾಲೆಗಾಂವ್ ಸ್ಫೋಟ ಪ್ರಕರಣಗಳ ತನಿಖೆ ನಿರ್ವಹಿಸಿದ ಎನ್‍ಐಎ ಕ್ರಮವನ್ನು ಪ್ರಶ್ನಿಸಿದರು. ಈ ಎಲ್ಲ ಪ್ರಕರಣಗಳೂ ಪರಸ್ಪರ ಸಂಬಂಧ ಹೊಂದಿವೆ. ಒಂದೇ ಗುಂಪು ಇದನ್ನು ತನಿಖೆ ನಡೆಸಿತ್ತು ಎಂದು ಅವರು ಹೇಳಿದರು.

ಮಾಲೆಗಾಂವ್ ಪ್ರಕರಣದಲ್ಲಿ ಮೃದು ನೀತಿ ಅನುಸರಿಸುವಂತೆ ಎನ್‍ಐಎ ಅಧಿಕಾರಿಗಳು ಒತ್ತಡ ತಂದಿದ್ದಾರೆ ಎಂದು ಮಾಲೆಗಾಂವ್ ಸ್ಫೋಟ ಪ್ರಕರಣದ ಅಭಿಯೋಜಕರು ಹೇಳಿದ್ದನ್ನು ರಾಯ್ ಉಲ್ಲೇಖಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News