ರೌಡಿ ಲಕ್ಷ್ಮಣ ಕೊಲೆ ಪ್ರಕರಣ: ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಸಿಸಿಬಿ ವಶಕ್ಕೆ ನೀಡಿದ ಕೋರ್ಟ್

Update: 2019-03-21 15:45 GMT

ಬೆಂಗಳೂರು, ಮಾ.21: ರೌಡಿ ಶೀಟರ್ ಲಕ್ಷ್ಮಣ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಜನ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ 1ನೆ ಎಸಿಎಂಎಂ ನ್ಯಾಯಾಲಯ ಸಿಸಿಬಿ ವಶಕ್ಕೆ ನೀಡಿ ಆದೇಶಿಸಿದೆ.

ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡಬೇಕೆಂದು ಸಿಸಿಬಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠವು ಪ್ರಕರಣದ ಆರೋಪಿಗಳಾದ ರೂಪೇಶ್, ವರ್ಷಿಣಿ, ಮಧು, ದೇವರಾಜ್, ವರುಣ್‌ನನ್ನು 5 ದಿನಗಳ ಕಾಲ ಸಿಸಿಬಿ ವಶಕ್ಕೆ ನೀಡಿ ವಿಚಾರಣೆಯನ್ನು ಮುಂದೂಡಿತು.

ಆರೋಪಿಗಳು ಮಾ.7ರಂದು ರೌಡಿ ಶೀಟರ್ ಲಕ್ಷ್ಮಣನನ್ನು ಕೊಲೆ ಮಾಡಿ ಹೊರ ರಾಜ್ಯಕ್ಕೆ ಪರಾರಿಯಾಗಿದ್ದರು. ಪರಾರಿಯಾಗುವಾಗ ಮೊಬೈಲ್ ಪೋನ್‌ಗಳನ್ನು ರಸ್ತೆಯಲ್ಲಿ ಬೀಸಾಡಿ ಹೋಗಿದ್ದರು. ಈ ಎಲ್ಲ ಮಾಹಿತಿಯನ್ನು ಕಲೆ ಹಾಕಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಆರೋಪಿಗಳ ವಿರುದ್ಧ ಕೋಕಾ ಆ್ಯಕ್ಟ್ ಜಾರಿ: ಈ ಕೊಲೆಯಲ್ಲಿ ಭಾಗಿಯಾದ ಎಲ್ಲ ಆರೋಪಿಗಳು ಮೊದಲಿನಿಂದಲು ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ. ರೂಪೇಶ್, ಕ್ಯಾಟ್ ರಾಜ, ಹೇಮಂತ, ದೇವರಾಜ ಸೇರಿದಂತೆ 9 ಜನರ ವಿರುದ್ದ ಕೊಲೆ, ಕೊಲೆ ಯತ್ನ, ದರೋಡೆಯಂತಹ ಪ್ರಕರಣಗಳು ದಾಖಲಾಗಿದೆ. ಈ ಹಿನ್ನಲೆಯಲ್ಲಿ ಸಂಘಟಿತ ಅಪರಾಧಗಳ ತಡೆ ಕಾಯ್ದೆಯಡಿ ಈ ಪ್ರಕರಣವನ್ನು ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News