ತುಮಕೂರು ಲೋಕಸಭಾ ಕ್ಷೇತ್ರ: ಇಂದು 3 ನಾಮಪತ್ರ ಸಲ್ಲಿಕೆ

Update: 2019-03-21 18:19 GMT

ತುಮಕೂರು,ಮಾ.21: ತುಮಕೂರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಮೂರನೇ ದಿನವಾದ ಮಾ. 21ರಂದು ಇಬ್ಬರು ಅಭ್ಯರ್ಥಿಗಳು 3 ನಾಮಪತ್ರ ಸಲ್ಲಿಸಿದ್ದಾರೆ. 

ಬೆಂಗಳೂರಿನ ಎಂ.ಆರ್.ಛಾಯಾ ಮೋಹನ್ (50) ಅವರು ಉತ್ತಮ ಪ್ರಜಾಕೀಯ ಪಕ್ಷದಿಂದ 1 ನಾಮಪತ್ರ ಹಾಗೂ ತುಮಕೂರಿನ ಜಿ.ಎಸ್.ಬಸವರಾಜ್ (77) ಭಾರತೀಯ ಜನತಾ ಪಕ್ಷದಿಂದ 2 ನಾಮಪತ್ರ ಸೇರಿ ಒಟ್ಟು 3 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News