ಎಸೆಸೆಲ್ಸಿ ಪರೀಕ್ಷೆ: ತುಮಕೂರಿನಲ್ಲಿ 1201 ವಿದ್ಯಾರ್ಥಿಗಳು ಗೈರು

Update: 2019-03-21 18:21 GMT

ತುಮಕೂರು,ಮಾ.21: ಜಿಲ್ಲೆಯಲ್ಲಿ ಇಂದು ನಡೆದ ಕನ್ನಡ/ ಉರ್ದು/ ಸಂಸ್ಕೃತ/ ಇಂಗ್ಲೀಷ್ ಪ್ರಥಮ ಭಾಷೆ ಎಸೆಸೆಲ್ಸಿ ಪರೀಕ್ಷೆಗೆ 1201 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.

ಪ್ರಥಮ ಭಾಷೆ ವಿಷಯ ಪರೀಕ್ಷೆಗೆ 34621 ವಿದ್ಯಾರ್ಥಿಗಳು ನೋಂದಣಿಯಾಗಿದ್ದು, 33420 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ತುಮಕೂರು ತಾಲೂಕಿನ 356, ಚಿ.ನಾ.ಹಳ್ಳಿ ತಾಲೂಕು 132, ಗುಬ್ಬಿ ತಾಲೂಕು 77, ಕುಣಿಗಲ್ ತಾಲೂಕು 94, ಕೊರಟಗೆರೆ ತಾಲೂಕು 61, ಮಧುಗಿರಿ ತಾಲೂಕು 105, ಪಾವಗಡ ತಾಲೂಕು 130, ಶಿರಾ ತಾಲೂಕಿನಲ್ಲಿ 98 ವಿದ್ಯಾರ್ಥಿಗಳು ಗೈರಾಗಿದ್ದಾರೆ.

ಪರೀಕ್ಷಾ ಕೇಂದ್ರಕ್ಕೆ ಡಿ.ಸಿ ಭೇಟಿ: ನಗರದ ಎಂಪ್ರೆಸ್ ಬಾಲಕಿಯರ ಪ್ರೌಢಶಾಲೆಯ ಎಸೆಸೆಲ್ಸಿ ಪರೀಕ್ಷಾ ಕೇಂದ್ರಕ್ಕೆ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಅವರು ಭೇಟಿ ನೀಡಿ ವೀಕ್ಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News