ಹನೂರು : ಕಾಡು ಪ್ರಾಣಿಗಳು ದಾಳಿ; ಜೋಳಬೆಳೆ ನಾಶ

Update: 2019-03-22 10:26 GMT

ಹನೂರು : ಕಾಡು ಪ್ರಾಣಿಗಳು ಜಮೀನಿಗೆ ದಾಳಿ ಮಾಡಿ, ಸುಮಾರು 2 ಏಕರೆ ಪ್ರದೇಶದಲ್ಲಿ ಬೆಳದಿದ್ದ ಮುಸುಕಿನಜೋಳ ಬೆಳೆಯನ್ನು ನಾಶಪಡಿಸಿವೆ.

ಹನೂರು ತಾಲ್ಲೂಕಿನ ಬೆಳ್ಳತ್ತೂರು ಸಮೀಪದ ಮುತ್ತಸ್ವಾಮಿನಾಯ್ಡು ಎಂಬವರಿಗೆ ಸೇರಿದ ಜಮೀನಿನಲ್ಲಿ ಮುಸುಕಿನ ಜೋಳ ಬೆಳೆಯಲಾಗಿತ್ತು. ತಡ ರಾತ್ರಿ ವೇಳೆ ಲಗ್ಗೆ ಹಿಟ್ಟ ಜಿಂಕೆ ಮತ್ತು ಕಡವೆಗಳು ಬೆಳೆಯನ್ನು ತಿಂದು ತುಳಿದು ನಾಶ ಪಡಿಸಿವೆ.

ಇದರಿಂದ ಸಾವಿರಾರು ರೂ. ನಷ್ಟಕ್ಕೆ ಒಳಗಾಗಿರುವ ರೈತನಿಗೆ  ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಹನೂರು ಸುತ್ತಮತ್ತಲ ಜಮೀನುಗಳಲ್ಲಿ ಕಾಡು ಪ್ರಾಣಿಗಳ ಆಗ್ಗಾಗೆ ಹಾವಳಿ ಹೆಚ್ಚಾಗಿದ್ದು, ರೈತರು ಕಷ್ಟಪಟ್ಟು ಬೆಳೆದ ಬೆಳೆಯನ್ನು ನಾಶಪಡಿಸುತ್ತಿವೆ. ಇದರಿಂದ ರೈತರು ನಷ್ಟಕ್ಕೆ ಈಡಾಗುತಿದ್ದಾರೆ. ಹೀಗಾಗಿ ಕಾಡು ಪ್ರಾಣಿಗಳು ಜಮೀನಿಗೆ ಲಗ್ಗೆ ಹಿಡುವುದನ್ನು ತಪ್ಪಿಸಲು ಅರಣ್ಯ ಇಲಾಖೆಯವರು ಸೂಕ್ತ ಕ್ರಮಕೈಗೂಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News