ಶಾಲಾ ಗುಂಡು ಹಾರಾಟದಲ್ಲಿ ಬದುಕುಳಿದಿದ್ದ ಯುವತಿ ಆತ್ಮಹತ್ಯೆ

Update: 2019-03-23 18:12 GMT

ಮಯಾಮಿ (ಅಮೆರಿಕ), ಮಾ. 23: ಒಂದು ವರ್ಷದ ಹಿಂದೆ ನಡೆದ ಪಾರ್ಕ್‌ಲ್ಯಾಂಡ್ ಶಾಲಾ ಗುಂಡು ಹಾರಾಟದಲ್ಲಿ ಬದುಕುಳಿದಿದ್ದ ಹದಿಹರೆಯದ ಯುವತಿಯೊಬ್ಬರು, ತಪ್ಪಿತಸ್ಥ ಭಾವನೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ಶುಕ್ರವಾರ ವರದಿ ಮಾಡಿವೆ.

19 ವರ್ಷದ ಸಿಡ್ನಿ ಅಯಲೊ ಪಾರ್ಕ್‌ಲ್ಯಾಂಡ್‌ನ ಮರ್ಜರಿ ಸ್ಟೋನ್‌ಮನ್ ಡಗ್ಲಸ್ ಶಾಲೆಯ ವಿದ್ಯಾರ್ಥಿನಿಯಾಗಿದ್ದರು. ಕಳೆದ ವರ್ಷದ ಫೆಬ್ರವರಿ 14ರಂದು ಆ ಶಾಲೆಯಲ್ಲಿ ಮಾಜಿ ವಿದ್ಯಾರ್ಥಿಯೊಬ್ಬ ಗುಂಡಿನ ದಾಳಿ ನಡೆಸಿ 14 ವಿದ್ಯಾರ್ಥಿಗಳು ಮತ್ತು ಮೂವರು ಸಿಬ್ಬಂದಿಯನ್ನು ಕೊಂದಿದ್ದನು.

ಮೃತರಲ್ಲಿ ಇಬ್ಬರು ಸಿಡ್ನಿ ಅಯಲೋರ ಆತ್ಮೀಯ ಗೆಳೆಯ-ಗೆಳತಿಯರಾಗಿದ್ದರು. ಅವರನ್ನು ಕಳೆದುಕೊಂಡ ದುಃಖದಲ್ಲಿ ಬದುಕಿನಲ್ಲಿ ಆಸಕ್ತಿ ಕಳೆದುಕೊಂಡು ಸಿಡ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News