ಹಫ್ತಾ ವಸೂಲಿ ಮಾಡುವುದು ಯಾರೆಂದು ಗೊತ್ತು: ಸಚಿವ ಡಿ.ಕೆ.ಶಿವಕುಮಾರ್

Update: 2019-03-24 14:00 GMT

ಬಳ್ಳಾರಿ, ಮಾ.25: ಬಿಜೆಪಿ ಅಭ್ಯರ್ಥಿಯಾಗಿರುವ ಜಾರಕಿಹೊಳಿ ಬೀಗರಾದ ದೇವೇಂದ್ರಪ್ಪ ಹಾಗೂ ಅವರ ಪುತ್ರ ಅಬಕಾರಿ ಆಯುಕ್ತ ಮಂಜುನಾಥರಿಗೆ ಸಚಿವ ಡಿ.ಕೆ ಶಿವಕುಮಾರ್ ನೇರವಾಗಿ ಎಚ್ಚರಿಕೆ ನೀಡಿದ್ದಾರೆ.

ರವಿವಾರ ಜಿಲ್ಲೆಯಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಉದ್ದೇಶಿಸಿ ಮಾತನಾಡಿದ ಶಿವಕುಮಾರ್, ಯಾರು ಯಾರು ಲಿಕ್ಕರ್ ಶಾಪ್‌ಗಳ ಮಾಲಕರ ಬಳಿ ಹಫ್ತಾ ವಸೂಲಿ ಮಾಡುತ್ತಿದ್ದಾರೆಂದು ನನಗೆ ಗೊತ್ತಿದೆ. ನಮ್ಮದೇನಿದ್ದರೂ ಅಭಿವೃದ್ಧಿ, ಹಫ್ತಾ ವಸೂಲಿ ರೋಲ್ಕಾಲ್ ಎಲ್ಲ ಬಂದ್ ಮಾಡುವುದು ಎಂದು ಹೇಳಿದ್ದಾರೆ.

ಲಿಕ್ಕರ್ ಶಾಪ್‌ಗಳ ಮಾಲಕರಿಗೆ ಹಣ ಕೊಡುವಂತೆ ಫೋನ್ ಬರುತ್ತಿರುವುದು ನನಗೆ ಗೊತ್ತಿದೆ. ಹಾಗೊಂದು ವೇಳೆ ಹಫ್ತಾ ವಸೂಲಿ ಮಾಡಿದರೆ ಸರಿಯಿರಲ್ಲ ಎಂದು ಡಿ.ಕೆ.ಶಿವಕುಮಾರ್ ಪರೋಕ್ಷವಾಗಿ ಜಾರಕಿಹೊಳಿ ಬೀಗರಾದ ಬಿಜೆಪಿ ಅಭ್ಯರ್ಥಿ ಹಾಗೂ ಅವರ ಪುತ್ರನಿಗೆ ಎಚ್ಚರಿಕೆ ನೀಡಿದ್ದಾರೆ.

ದೇವೇಂದ್ರಪ್ಪ ಬೇಕಾದರೆ ಲೋಡ್ ಗಟ್ಟಲೇ ತುಂಬಿಕೊಂಡು ಬರಲಿ. ನಾವೂ ಚುನಾವಣೆ ಮಾಡೋಣ, ದೇವೇಂದ್ರಪ್ಪ ಅನ್ನೋ ಮೀನು ಶ್ರೀರಾಮುಲು ಗಾಳಕ್ಕೆ ಬಿದ್ದಿದೆ. ಆದರೆ ನಾವೂ ಯಾರಿಂದಲೂ ಹಫ್ತಾ ವಸೂಲಿ ಮಾಡಲು ಬಿಡುವುದಿಲ್ಲ ಎಂದರು. ಸಮಾವೇಶದಲ್ಲಿ ಸಚಿವ ಪರಮೇಶ್ವರ ನಾಯ್ಕ್, ತುಕಾರಾಂ ಸೇರಿದಂತೆ ಹಲವು ಕಾಂಗ್ರೆಸ್ ಜೆಡಿಎಸ್ ನಾಯಕರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News