ಐಪಿಎಲ್ ಪಂದ್ಯದ ವೇಳೆ ಪ್ರೇಕ್ಷಕರು ‘ಚೌಕಿದಾರ್ ಚೋರ್ ಹೇ’ ಎಂದು ಘೋಷಣೆ ಕೂಗಿದ್ದರೇ?

Update: 2019-03-26 17:35 GMT

ಹೊಸದಿಲ್ಲಿ, ಮಾ.26: ಇಂಡಿಯನ್ ಪ್ರೀಮಿಯರ್ ಲೀಗ್‍ ನಲ್ಲಿ ಸೋಮವಾರ ನಡೆದ ಕಿಂಗ್ಸ್ 11 ಪಂಜಾಬ್ ಮತ್ತು ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯದಲ್ಲಿ ಪ್ರೇಕ್ಷಕರು "ಚೌಕಿದಾರ್ ಚೋರ್ ಹೇ" ಎಂದು ಘೋಷಣೆ ಕೂಗುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

‘ಚೌಕಿದಾರ್ ಚೋರ್ ಹೆ’ (ಕಾವಲುಗಾರ ಕಳ್ಳ) ಎನ್ನುವುದು ರಫೇಲ್ ಯುದ್ಧವಿಮಾನ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್‍ ಗಾಂಧಿಯವರು ನರೇಂದ್ರ ಮೋದಿಯವರ ವಿರುದ್ಧ ಬಳಸಿದ ಘೋಷಣೆಯಾಗಿದೆ.

ಪ್ರಧಾನಿ ನರೇಂದ್ರ ಮೋದಿ ಇದಕ್ಕೆ ವಿರುದ್ಧವಾಗಿ ತಮ್ಮ ಟ್ವಿಟರ್ ಹ್ಯಾಂಡಲ್‍ನಲ್ಲಿ ಚೌಕಿದಾರ್ ಎಂದು ಸೇರಿಸಿ, ಇತರ ಬಿಜೆಪಿ ಮುಖಂಡರು ಮತ್ತು ಬೆಂಬಲಿಗರು ಕೂಡಾ ಇದನ್ನೇ ಮಾಡಬೇಕು ಎಂದು ಸೂಚಿಸಿದ್ದರು.

ಸೋಮವಾರದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‍ನ ಜಯದೇವ್ ಉನಾದ್ಕತ್ ಅವರು ಒಂದು ವೈಡ್‍ ಬಾಲ್ ಹಾಕಿದ ತಕ್ಷಣ ಈ ಘೋಷಣೆ ಪ್ರೇಕ್ಷಕರಿಂದ ಕೇಳಿಬಂದಿರುವುದು ವಿಡಿಯೋ ತುಣುಕಿನಲ್ಲಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 18ನೇ ಓವರ್‍ ನಲ್ಲಿ ಮೂರು ವಿಕೆಟ್ ನಷ್ಟಕ್ಕೆ 160 ರನ್ ಮಾಡಿದ್ದಾಗ ಈ ಘೋಷಣೆ ಕೂಗಿರುವುದು ಸ್ಕೋರ್‍ ಬೋರ್ಡ್‍ ನಿಂದ ತಿಳಿದುಬರುತ್ತದೆ.

ಫ್ಯಾಕ್ಟ್ ಚೆಕ್

ಈ ಬಗ್ಗೆ boomlive.in ಫ್ಯಾಕ್ಟ್ ಚೆಕ್ ನಡೆಸಿದ್ದು, ವೈರಲ್ ಆಗುತ್ತಿರುವ ವಿಡಿಯೋ ಸತ್ಯ ಮತ್ತು ಪಂದ್ಯದ ವೇಳೆ ಪ್ರೇಕ್ಷಕರು ‘ಚೌಕಿದಾರ್ ಚೋರ್ ಹೇ’ ಎಂದು ಘೋಷಣೆ ಕೂಗಿದ್ದರು ಎನ್ನುವುದನ್ನು ಕಂಡುಕೊಂಡಿದೆ.

ಹಾಟ್ ಸ್ಟಾರ್ ಆ್ಯಪ್ ನಲ್ಲಿ ಆ ಪಂದ್ಯದ ವಿಡಿಯೋ ಈಗಲೂ ಲಭ್ಯವಿದ್ದು, 2:30:32 ನಿಮಿಷಗಳಲ್ಲಿ ಈ ಘೋಷಣೆ ಕೇಳಿಸುತ್ತದೆ.

ಹಾಟ್ ಸ್ಟಾರ್ ವಿಡಿಯೋದ ಲಿಂಕ್ ಈ ಕೆಳಗಿದೆ

http://bit.ly/2HNhw9h

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News