ಮಡಿಕೇರಿ: ಲಯನ್ಸ್ ಕ್ಲಬ್ ನಿಂದ ಸಂತ್ರಸ್ತ ಕುಟುಂಬಗಳಿಗೆ ಮನೆ ಹಸ್ತಾಂತರ
ಮಡಿಕೇರಿ, ಮಾ.27: ಕಳೆದ ವರ್ಷ ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಮನೆಗಳನ್ನು ಕಳೆದುಕೊಂಡ 2 ಕುಟುಂಬಗಳಿಗೆ ಲಯನ್ಸ್ ಕ್ಲಬ್ ವತಿಯಿಂದ ಮನೆಗಳನ್ನು ನಿರ್ಮಿಸಿಕೊಡಲಾಗಿದೆ.
ಲಯನ್ಸ್ ಜಿಲ್ಲೆ ಹಾಗೂ ಲಯನ್ಸ್ ಪ್ರಾಂತ್ಯ 8 ರ ಗೋಣಿಕೊಪ್ಪ, ಸಿದ್ದಾಪುರ, ಮಡಿಕೇರಿ ಲಯನ್ಸ್ ಸಂಸ್ಥೆಗಳ ಸಹಕಾರದೊಂದಿಗೆ ಸುಂಟಿಕೊಪ್ಪದ ಕುಂಬಾರಗಡಿಗೆ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ನೂತನ ಮನೆಗಳನ್ನು ಎರಡು ಕುಟುಂಬಗಳ ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು.
ಲಯನ್ಸ್ ಜಿಲ್ಲಾ ಗವರ್ನರ್ ದೇವದಾಸ್ ಭಂಡಾರಿ, ಪ್ರಾಂತೀಯ ಅಧ್ಯಕ್ಷ ಲಯನ್ ಬೋಸ್ ಪೆಮ್ಮಯ್ಯ ಜಿಲ್ಲಾ ನಿರ್ವಹಣಾ ಸಂಪರ್ಕಾಧಿಕಾರಿ ಲಯನ್ ಧನು ಉತ್ತಯ್ಯ, ವಲಯ ಅಧ್ಯಕ್ಷರಾದದ ಲಯನ್ ಕೋಟಿ, ಲಯನ್ ಡಾಕ್ಟರ್ ಸೂರಜ್ ಉತ್ತಪ್ಪ, ಮಡಿಕೇರಿ ಲಯನ್ ಸಂಸ್ಥೆಯ ಅಧ್ಯಕ್ಷ ಲಯನ್ ಕೆ.ಕೆ.ದಾಮೋದರ್, ಗೋಣಿಕೊಪ್ಪ ಸಂಸ್ಥೆಯ ಅಧ್ಯಕ್ಷರು ಲಯನ್ ಸ್ಮರಣ ಸುಭಾಷ್, ಸಿದ್ದಾಪುರ ಲಯನ್ ಸಂಸ್ಥೆಯ ಅಧ್ಯಕ್ಷರು ಲಯನ್ ವಿವೇಕ್ ಜೋಯಪ್ಪ ಸೇರಿದಂತೆ ಇತರ ಲಯನ್ಸ್ ಕ್ಲಬ್ ಹಾಗೂ ಕೊಡಗು ಸೇವಾ ಕೇಂದ್ರದ ಸದಸ್ಯರು ಹಾಜರಿದ್ದರು.