ಬಿಜೆಪಿಯನ್ನು ಸೋಲಿಸುವ ಮೂಲಕ ಸಂವಿಧಾನ ಉಳಿಸಬೇಕಿದೆ: ಡಾ.ಎಚ್.ಸಿ.ಮಹದೇವಪ್ಪ

Update: 2019-03-27 18:09 GMT

ಮೈಸೂರು, ಮಾ.27: ಐದು ವರ್ಷಗಳಿಂದ ಕೋಮುವಾದ ಬಲಗೊಳ್ಳುತ್ತಿದ್ದು ಬಿಜೆಪಿಯನ್ನು ಸೋಲಿಸುವ ಮೂಲಕ ಸಂವಿಧಾನವನ್ನು ಉಳಿಸಬೇಕಿದೆ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಕರೆ ನೀಡಿದ್ದಾರೆ.

ನಗರದ ಕಾಂಗ್ರೆಸ್ ಭವನದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಕಾರ್ಮಿಕ ಘಟಕದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿ, ಆರೆಸ್ಸೆಸ್, ಬಜರಂಗದಳ ದೇಶದಲ್ಲಿ ಹಿಡಿತ ಸಾಧಿಸಲು ಮುಂದಾದ ಹಿನ್ನೆಲೆಯಲ್ಲಿ ದೇಶದ ಸಂವಿಧಾನ ಸಂಕಷ್ಟದಲ್ಲಿದೆ. ಹೀಗಾಗಿ ಕೋಮುವಾದ ಹಿಮ್ಮೆಟ್ಟಿಲು ಕಾಂಗ್ರೆಸ್ ಮತ್ತು ಎಲ್ಲಾ ಪಕ್ಷಗಳು ಒಂದಾಗಿ ಕೈ ಜೋಡಿಸುತ್ತಿವೆ ಎಂದು ಹೇಳಿದರು.

ಮತ್ತೊಂದು ಸ್ವಾತಂತ್ರ ಸಂಗ್ರಾಮಕ್ಕೆ ನಾವು ಅಣಿಯಾಗುತ್ತಿದ್ದೇವೆ. ಚುನಾವಣೆ ಎಂದರೆ ವ್ಯಕ್ತಿಗಳ ವೈಯಕ್ತಿಕ ಟೀಕೆಗಳಲ್ಲ. ದೇಶದ ಸಮಸ್ಯೆಗಳ ಬಗೆಹರಿಸಲು ಉತ್ತಮ ನಾಯಕರ ಆಯ್ಕೆ ಮಾಡುವ ಕಾಲ. ಸ್ವಾತಂತ್ರದ ನಂತರದಲ್ಲಿ ಎಲ್ಲಾ ಉದ್ದೇಶಗಳನ್ನು ಒಳಗೊಂಡ ಪ್ರಪಂಚವೇ ಮೆಚ್ಚುವ ಸಂವಿಧಾನವನ್ನು ಅಂಬೇಡ್ಕರ್ ನೀಡಿದ್ದು ಈ ನಡುವೆ ಕಾಂಗ್ರೆಸ್ 70 ವರ್ಷ ಉತ್ತಮ ಆಡಳಿತ ನೀಡಿದೆ ಎಂದು ಹೇಳಿದರು.

ಸಭೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ಬಿ.ಜೆ.ವಿಜಯ್‌ಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಕಾರ್ಮಿಕ ಘಟಕದ ಅಧ್ಯಕ್ಷ ಮಾವಿನಹಳ್ಳಿ ರವಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News