×
Ad

ಆ.30 ರಿಂದ ವಿಶ್ವ ಕನ್ನಡ ಸಮ್ಮೇಳನ

Update: 2019-03-28 23:04 IST

ಬೆಂಗಳೂರು, ಮಾ.28: ಅಮೆರಿಕಾದ ಓಹಾಯೋದಲ್ಲಿ ಆ.30 ರಿಂದ ಸೆ.1 ರವರೆಗೆ 5 ನೆ ವಿಶ್ವ ಕನ್ನಡ ಸಮ್ಮೇಳನವನ್ನು ನಾವಿಕ ಅಂತರ್‌ರಾಷ್ಟ್ರೀಯ ಸಂಸ್ಥೆ ವತಿಯಿಂದ ಆಯೋಜಿಸಲಾಗಿದೆ ಎಂದು ಸಮ್ಮೇಳನದ ರೂವಾರಿ ಡಾ.ಮನಮೋಹನ್ ಕಟ್ಟಪಾಡಿ ಹೇಳಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಓಹಾಯೋ ರಾಜ್ಯದ ಸಿನ್ಸಿನಾಟಿ ನಗರದಲ್ಲಿ ಮೂರು ದಿನ ನಡೆಯುವ ಕನ್ನಡ ಉತ್ಸವದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಡಿ.ಕೆ.ಶಿವಕುಮಾರ್, ನಟ ಗಣೇಶ್ ಹಾಗೂ ಶಿಲ್ಪಾ ಗಣೇಶ ಸೇರಿದಂತೆ ಮತ್ತಿತರರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಕನ್ನಡದ ಉಗಮ, ಕನ್ನಡದ ಸೊಬಗು, ಕನ್ನಡದ ಸೊಗಡನ್ನು ಈ ಉತ್ಸವದಲ್ಲಿ ಬಿಂಬಿಸಲಾಗುವುದು. ಕನ್ನಡದ ನಾಟಕಗಳು, ಕನ್ನಡದ ಕವಿ ಗೋಷ್ಠಿಗಳು, ಚಲನಚಿತ್ರಗಳು, ಗೀತ ಗಾಯನ, ಭಾವ ಗೀತೆಗಳ ಗಾಯನ, ಸಂಗೀತ ಸಂಜೆ, ಮಹಿಳಾ ಹಕ್ಕು ಮತ್ತು ಸ್ವಾತಂತ್ರದ ಬಗ್ಗೆ ಗೋಷ್ಠಿಗಳು, ಯುವ ಸಮೂಹಕ್ಕೆ ಮಾರ್ಗದರ್ಶನದ ಗೋಷ್ಠಿಗಳು ನಡೆಯಲಿವೆ.

ಸ್ವಂತ ಉದ್ಯಮ ಪ್ರಾರಂಭ ಮಾಡಲು ಇಚ್ಛಿಸುವವರಿಗೆ ಮಾರ್ಗದರ್ಶನ ಮತ್ತು ಸಹಾಯ, ಸಮಾಜಮುಖಿ ಕೆಲಸಗಳ ಅನುಷ್ಠಾನಕ್ಕೆ ಪ್ರೇರಣೆ ಹೀಗೆ ಹಲವು ಚಟುವಟಿಕೆಗಳಿಗೆ ಸಮ್ಮೇಳನದಲ್ಲಿ ಆದ್ಯತೆ ನೀಡಲಾಗುವುದು. ಈ 5ನೇ ವಿಶ್ವ ಕನ್ನಡ ಸಮ್ಮೇಳನದಲ್ಲಿ ಸುಮಾರು 3 ಸಾವಿರ ಕನ್ನಡಿಗರು ಪ್ರಪಂಚದ ಬೇರೆ ಬೇರೆ ಕಡೆಗಳಿಂದ ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News