ಎರಡನೇ ಹಂತದ ಮತದಾನ: ಮೊದಲ ದಿನ 20 ನಾಮಪತ್ರಗಳ ಸಲ್ಲಿಕೆ

Update: 2019-03-28 17:47 GMT

ಬೆಂಗಳೂರು, ಮಾ.28: ರಾಜ್ಯದ 2 ನೆ ಹಂತದ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಬಿ.ವೈ.ರಾಘವೇಂದ್ರ ಸೇರಿದಂತೆ ಮೊದಲ ದಿನ 15 ಅಭ್ಯರ್ಥಿಗಳಿಂದ 20 ನಾಮಪತ್ರಗಳು ಸಲ್ಲಿಕೆಯಾಗಿವೆ.

ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಒಬ್ಬ ಅಭ್ಯರ್ಥಿ ಒಂದು ನಾಮಪತ್ರ, ಬೆಳಗಾವಿ ಕ್ಷೇತ್ರದಿಂದ ಒಬ್ಬ ಅಭ್ಯರ್ಥಿಯಿಂದ 2 ನಾಮಪತ್ರ, ಬಾಗಲಕೋಟೆಯಿಂದ 3 ಅಭ್ಯರ್ಥಿಗಳಿಂದ 3 ನಾಮಪತ್ರ, ಬಿಜಾಪುರ ಕ್ಷೇತ್ರದಿಂದ 2 ಅಭ್ಯರ್ಥಿಗಳಿಂದ 2 ನಾಮಪತ್ರ, ಕೊಪ್ಪಳ ಕ್ಷೇತ್ರದಿಂದ ಒಬ್ಬ ಅಭ್ಯರ್ಥಿಯಿಂದ 2 ನಾಮಪತ್ರ, ಬಳ್ಳಾರಿ ಕ್ಷೇತ್ರದಿಂದ ಒಬ್ಬ ಅಭ್ಯರ್ಥಿಯಿಂದ 3 ನಾಮಪತ್ರ, ಹಾವೇರಿ ಕ್ಷೇತ್ರದಿಂದ ಒಬ್ಬ ಅಭ್ಯರ್ಥಿಯಿಂದ 2 ನಾಮಪತ್ರಗಳು ಸಲ್ಲಿಕೆಯಾಗಿವೆ.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಒಬ್ಬ ಅಭ್ಯರ್ಥಿಯಿಂದ ಒಂದು ನಾಮಪತ್ರ, ದಾವಣಗೆರೆ ಕ್ಷೇತ್ರದಿಂದ ಒಬ್ಬ ಅಭ್ಯರ್ಥಿಯಿಂದ ಒಂದು ನಾಮಪತ್ರ, ಶಿವಮೊಗ್ಗ ಕ್ಷೇತ್ರದಿಂದ ಒಬ್ಬ ಅಭ್ಯರ್ಥಿಯಿಂದ ಒಂದು ನಾಮಪತ್ರ ಸಲ್ಲಿಕೆಗೊಂಡಿವೆ. ಇನ್ನುಳಿದಂತೆ ಗುಲಬರ್ಗಾ, ರಾಯಚೂರು, ಬೀದರ್, ಧಾರವಾಡ ಲೋಕಸಭಾ ಕ್ಷೇತ್ರಗಳಿಂದ ಮೊದಲ ದಿನ ಒಂದು ನಾಮಪತ್ರವೂ ಸಲ್ಲಿಕೆಯಾಗಿಲ್ಲ. ಒಟ್ಟಾರೆ ಅಭ್ಯರ್ಥಿಗಳಲ್ಲಿ 14 ಪುರುಷರು ಹಾಗೂ 1 ಮಹಿಳಾ ಅಭ್ಯರ್ಥಿಗಳಿದ್ದಾರೆ ಎಂದು ಚುನಾವಣಾ ಆಯೋಗದ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News