×
Ad

5 ವರ್ಷದಲ್ಲಿ ಮೋದಿ ಬರೀ ಟ್ರೇಲರ್ ತೋರಿಸಿದ್ದಾರೆ: ಶ್ರೀರಾಮುಲು

Update: 2019-03-28 23:31 IST

ಶಿವಮೊಗ್ಗ, ಮಾ. 28: ಕಳೆದ 5 ವರ್ಷದ ಆಡಳಿತಾವದಿಯಲ್ಲಿ ನರೇಂದ್ರ ಮೋದಿಯವರು ಬರೀ ಟ್ರೇಲರ್ ತೋರಿಸಿದ್ದಾರೆ. ಇನ್ನೂ ಸಿನಿಮಾ ಆರಂಭವಾಗಿಲ್ಲ. ಈ ಚುನಾವಣೆಯಲ್ಲಿ ಭರ್ಜರಿ ಜಯದೊಂದಿಗೆ ಸಿನಿಮಾ ತೋರಿಸಲಿದ್ದಾರೆ ಎಂದು ಮಾಜಿ ಸಚಿವ ಶ್ರೀರಾಮುಲು ತಿಳಿಸಿದ್ದಾರೆ. 

ಗುರುವಾರ ನಗರದ ಎನ್.ಇ.ಎಸ್. ಮೈದಾನದಲ್ಲಿ ಬಿಜೆಪಿ ಪಕ್ಷ ಆಯೋಜಿಸಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ವಿಶ್ವದಲ್ಲಿಯೇ ಭಾರತದ ಆರ್ಥಿಕತೆ 5 ನೇ ಸ್ಥಾನದಲ್ಲಿದೆ. ಇಡೀ ವಿಶ್ವ ಭಾರತವನ್ನು ನೋಡುತ್ತಿದೆ. ಇದಕ್ಕೆ ನರೇಂದ್ರ ಮೋದಿಯವರ ಸಮರ್ಥ ಆಡಳಿತ ಕಾರಣವಾಗಿದೆ ಎಂದರು. 

ದೇಶದಾದ್ಯಂತ ಮೋದಿ ಅಲೆ ಕಂಡುಬರುತ್ತಿದೆ. ಅವರ ದಕ್ಷ ಆಡಳಿತಕ್ಕೆ ದೇಶವಾಸಿಗಳು ಬೆಂಬಿಸುವುದು ನಿಶ್ಚಿತವಾಗಿದ್ದು, ಮತ್ತೆ ಪ್ರಧಾನ ಮಂತ್ರಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ವಿರೋಧ ಪಕ್ಷಗಳು ಧೂಳೀಪಟವಾಗಲಿವೆ ಎಂದರು. 

ಕಳೆದ 5 ವರ್ಷಗಳ ಅವರ ಆಡಳಿತಾವದಿಯಲ್ಲಿ ಒಂದೇ ಒಂದು ಭ್ರಷ್ಟಾಚಾರ ನಡೆದಿಲ್ಲ. ಇಡೀ ವಿಶ್ವ ಅವರ ನಾಯಕತ್ವಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ. ಮೋದಿ ಜನಪ್ರಿಯತೆ ಕಾಂಗ್ರೆಸ್‍ಗೆ ತಳಮಳ ಸೃಷ್ಟಿಸಿದೆ. ಬಿಜೆಪಿಗೆ ವ್ಯಕ್ತವಾಗುತ್ತಿರುವ ಬೆಂಬಲ ಗಮನಿಸಿದರೆ, ಕಾಂಗ್ರೆಸ್ ಪಕ್ಷ ಹೇಳ ಹೆಸರಿಲ್ಲದಂತಾಗಲಿದೆ. ಸಂಪೂರ್ಣ ನಿರ್ನಾಮವಾಗಲಿದೆ ಎಂದು ಟೀಕಾಪ್ರಹಾರ ನಡೆಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News