ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ

Update: 2019-03-28 18:02 GMT

ಶಿವಮೊಗ್ಗ, ಮಾ. 28: ಬಾವಿಯಲ್ಲಿ ತಾಯಿ ಹಾಗೂ ಮಗಳ ಶವಗಳು ಪತ್ತೆಯಾಗಿರುವ ಘಟನೆ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಸಮೀಪದ ಗೋಳಿಬೈಲಿನಲ್ಲಿ ಬುಧವಾರ ನಡೆದಿದೆ. 

ಚಿನ್ನಮ್ಮ (65) ಹಾಗೂ ಅವರ ಪುತ್ರಿ ಸುಹಾಸಿನಿ (21) ಎಂಬುವರೇ ಮೃತಪಟ್ಟವರೆಂದು ಗುರುತಿಸಲಾಗಿದೆ. ಕಳೆದ ಕೆಲ ದಿನಗಳ ಹಿಂದೆಯೇ ಇವರು ಬಾವಿಗೆ ಬಿದ್ದಿದ್ದು, ನೀರಿನಲ್ಲಿ ಶವ ತೇಲುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಈ ಸಂಬಂಧ ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ನಿಗೂಢ ಪ್ರಕರಣ: ಚಿನ್ನಮ್ಮ ಅವರಿಗೆ ನಾಲ್ಕು ಜನ ಮಕ್ಕಳಿದ್ದಾರೆ. ಇದರಲ್ಲಿ ಇಬ್ಬರು ಗಂಡು ಮಕ್ಕಳು ಹಾಗೂ ಓರ್ವ ಪುತ್ರಿಗೆ ಮದುವೆಯಾಗಿದೆ. ಪ್ರಸ್ತುತ ಚಿನ್ನಮ್ಮರವರು ತಮ್ಮ ಕಿರಿಯ ಪುತ್ರಿ ಸುಹಾಸಿನಿ ಜೊತೆ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದರು. 

ಸುಹಾಸಿನಿಯು ಪದವಿಯ ದ್ವಿತೀಯ ವರ್ಷಕ್ಕೆ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದರು. ತಾಯಿ - ಮಗಳು ಸ್ಥಳೀಯರ ಜೊತೆ ಹೆಚ್ಚು ಬೆರೆಯುತ್ತಿರಲಿಲ್ಲ. ಇವರು ಎರಡು ದಿನಗಳ ಹಿಂದೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸ್ಥಳೀಯ ಮೂಲಗಳು ಮಾಹಿತಿ ನೀಡುತ್ತವೆ. ಪೊಲೀಸರು ತನಿಖೆ ಮುಂದುವರಿಸಿದ್ದು, ಇನ್ನಷ್ಟೆ ಇವರ ಸಾವಿಗೆ ಕಾರಣವೆನೆಂಬುವುದು ತಿಳಿದುಬರಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News