×
Ad

ಮುದ್ದಹನುಮೇಗೌಡ ನಾಮಪತ್ರ ವಾಪಸ್ ಪಡೆಯಲು ನಿರ್ಧಾರ

Update: 2019-03-29 14:20 IST

ಬೆಂಗಳೂರು, ಮಾ.29: ತುಮಕೂರು ಲೋಕಸಭಾ ಕ್ಷೇತ್ರದಿಂದ  ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕಾಂಗ್ರೆಸ್ ನ  ಸಂಸದ ಮುದ್ದಹನುಮೇಗೌಡ ನಾಮಪತ್ರವನ್ನು ಹಿಂಪಡೆಯುವ  ನಿರ್ಧಾರ ಕೈಗೊಂಡಿದ್ದಾರೆ.

ಕಾಂಗ್ರೆಸ್ ನ ಹೈಕಮಾಂಡ್ ನ ಒತ್ತಡಕ್ಕೆ ಮಣಿದು ಈನಿರ್ಧಾರ ಕೈಗೊಂಡಿದ್ದಾರೆ . ನಾಮಪತ್ರವನ್ನು ಜಿಲ್ಲಾಧಿಕಾರಿ ಕಚೇರಿಂದ ವಾಪಸ್ ಪಡೆಯಲು ಮುದ್ದಹನುಮೇಗೌಡ ಅವರು ತನ್ನ ಆಪ್ತರಾದ ರಾಯಸಂದ್ರ ರವಿ ಕುಮಾರ್  ಅವರಿಗೆ ಸಲಹೆ ನೀಡಿದ್ದಾರೆ. ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಮಾನಸಿಕವಾಗಿ ನೊಂದಿರುವ ಹನುಮೇಗೌಡ ಕ್ಷೇತ್ರದಿಂದ ದೂರ ಇರಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News