×
Ad

ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾ.ಎಲ್.ನಾರಾಯಣಸ್ವಾಮಿಗೆ ಪಿತೃ ವಿಯೋಗ

Update: 2019-03-29 23:01 IST

ಬೆಂಗಳೂರು, ಮಾ.28: ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್.ನಾರಾಯಣ ಸ್ವಾಮಿ ಅವರ ತಂದೆ ಪಿ.ಲಿಂಗಪ್ಪ(89) ಶುಕ್ರವಾರ ನಿಧನರಾದರು.

ವಯೋ ಸಹಜ ದೈಹಿಕ ಸಮಸ್ಯೆಗಳಿಂದ ಬಳಲಿದ್ದ ಅವರು ಬೆಳಗ್ಗೆ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ಮೃತರು ಎಲ್.ನಾರಾಯಣ ಸ್ವಾಮಿ ಸೇರಿದಂತೆ ಐವರು ಪುತ್ರರು ಮತ್ತು ಒಬ್ಬ ಪುತ್ರಿಯನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಚಳ್ಳಕೆರೆ ತಾಲೂಕಿನ ಮಹದೇವಪುರದಲ್ಲಿ ನಾಳೆ (ಮಾ.30) ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ. ಲಿಂಗಪ್ಪ ಅವರು ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆಯ ನಿವೃತ್ತ ನೌಕರರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News