ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ: ಅಂತಿಮ ಕಣದಲ್ಲಿ 22 ಮಂದಿ
ಮೈಸೂರು,ಮಾ.29: ಮೈಸೂರು-ಕೊಡಗು ಲೋಕಸಭಾ ಚುನಾಣೆಯ ಅಂತಿಮ ಹಂತದ ಕಣದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್, ಬಿಜೆಪಿಯ ಪ್ರತಾಪ್ ಸಿಂಹ, ಬಿಎಸ್ಪಿಯ ಡಾ.ಚಂದ್ರು ಸೇರಿದಂತೆ ಒಟ್ಟು 22 ಮಂದಿ ಉಳಿದಿದ್ದಾರೆ.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಮಾ.19 ರಿಂದ 26 ರವರೆಗೆ ಒಟ್ಟು 30 ಮಂದಿ ನಾಮಪತ್ರ ಸಲ್ಲಿಸಿದ್ದು, ನಾಮಪತ್ರ ಪರಿಶೀಲನೆ ವೇಳೆ ಐವರ ನಾಮಪತ್ರ ತಿರಸ್ಕೃತಗೊಂಡಿತ್ತು. ಮಾ.29 ರಂದು ನಾಮಪತ್ರ ಹಿಂಪಡೆಯಲು ಕೊನೆ ದಿನವಾಗಿದ್ದು ಮೂವರು ತಮ್ಮ ನಾಮಪತ್ರವನ್ನು ವಾಪಸ್ ಪಡೆದಿದ್ದಾರೆ. ಅಂತಿಮವಾಗಿ 22 ಮಂದಿ ಚುನಾವಣಾ ಕಣದಲ್ಲಿ ಉಳಿದಿದ್ದಾರೆ.
ತಿರಸ್ಕೃತಗೊಂಡವರು: ಆನಂದ ಜೆ.ಜೆ. ಕಾಂಗ್ರೆಸ್ (ಐ), ಸಿದ್ದರಾಜು ಎಂ. ಬಿ.ಎಸ್.ಪಿ, ಮಧು ಎಂ. ಸಂಪೂರ್ಣ ಭಾರತ್ ಕ್ರಾಂತಿ ಪಾರ್ಟಿ, ಎನ್.ಎ.ಸತೀಶ್ ಪೈ, ಶಿವಸೇನ, ಅಖೀಲ್ ಅಹ್ಮದ್, ಪಕ್ಷೇತರ.
ನಾಮಪತ್ರ ವಾಪಸ್ ಪಡೆದವರು: ಪಿ.ಎಸ್.ಯಡಿಯೂರಪ್ಪ-ಪಕ್ಷೇತರ, ಖಲೀಮ್ ಎಂ-ಪಕ್ಷೇತರ, ಶ್ರೀನಿವಾಸ ಎಂ.-ಪಕ್ಷೇತರ.
ಅಂತಿಮ ಕಣದಲ್ಲಿ ಇರುವವರು: ಡಾ.ಬಿ.ಚಂದ್ರು-ಬಿಎಸ್‍ಪಿ, ಪ್ರತಾಪ್ ಸಿಂಹ-ಬಿಜೆಪಿ, ಸಿ.ಎಚ್.ವಿಜಯಶಂಕರ್-ಕಾಂಗ್ರೆಸ್, ಅಯೂಬ್ ಖಾನ್-ಇಂಡಿಯನ್ ನೈಊ ಕಂಗ್ರೆಸ್, ಆಶಾ ರಾಣಿ ವಿ.-ಉತ್ತಮ ಪ್ರಜಾಕೀಯ ಪಾರ್ಟಿ, ಪಿ.ಕೆ.ಬಿದ್ದಪ್ಪ-ಕರ್ನಾಟಕ ಪ್ರಜಾ ಪಾರ್ಟಿ(ರೈತಪರ್ವ), ಸಂಧ್ಯಾ ಪಿ.ಎಸ್.-ಸೋಸಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್), ಆನಂದ ಕುಮಾರ್ ಎಂ., ಕಾವೇರಿಯಮ್ಮ ಎನ್.ಕೆ., ನಾಗೇಶ್ ಎನ್., ನಿಂಗಪ್ಪ ಬಿ.ಡಿ., ಜಿ.ಎಂ.ಮಹದೇವ, ಆರ್.ಮಹೇಶ, ರವಿ, ರಾಜು ಬಿನ್ ಲೇಟ್ ಚಲುವಶೆಟ್ಟಿ, ಲೋಕೇಶ್ ಕುಮಾರ್ ಜಿ., ಆಲಗೂಡು ಲಿಂಗರಾಜು, ವೆಂಕಟೇಶ ಡಿ.ನಾಯಕ, ಶ್ರೀನಿವಾಸಯ್ಯ, ಎಂ.ಜೆ.ಸುರೇಶ್ ಗೌಡ, ಆಲಿ ಶಾನ್ ಎಸ್, ಕೆ.ಎಸ್.ಸೋಮಸುಂದರ್ ಪಕ್ಷೇತರರಾಗಿ ಕಣದಲ್ಲಿ ಉಳಿದಿದ್ದಾರೆ.