ಕ್ಷಿಪಣಿ ಯೋಜನೆಗೆ ಯುಪಿಎ ಒಪ್ಪಿಗೆ ನೀಡದಿರಲು ಕಾರಣವೇನು: ನಂಬಿ ನಾರಾಯಣನ್ ಹೇಳಿದ್ದು ಹೀಗೆ…

Update: 2019-03-30 08:46 GMT

ತಿರುವನಂತಪುರಂ, ಮಾ.30: ಉಪಗ್ರಹ ಹೊಡೆದುರುಳಿಸುವ ಕ್ಷಿಪಣಿ ಯೋಜನೆ ಕಾರ್ಯಗತಗೊಳಿಸಲು ಹಿಂದಿನ ಯುಪಿಎ ಸರ್ಕಾರ ಡಿಆರ್‍ಡಿಒಗೆ ಅನುಮತಿ ನೀಡದಿರಲು ಕಾರಣಗಳಿರಬಹುದು ಎಂದು ನಿವೃತ್ತ ಇಸ್ರೋ ವಿಜ್ಞಾನಿ ಹಾಗೂ ಪದ್ಮಭೂಷಣ ಪುರಸ್ಕೃತ ನಂಬಿ ನಾರಾಯಣನ್ ಪ್ರತಿಪಾದಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಮಿಷನ್ ಶಕ್ತಿ ಘೋಷಿಸಿದ ಬೆನ್ನಲ್ಲೇ ಇಂಡಿಯನ್ ಎಕ್ಸ್‍ಪ್ರೆಸ್ ಜತೆ ಮಾತನಾಡಿದ ಅವರು, "ಯೋಜನೆಗೆ ಕ್ಲಿಯರೆನ್ಸ್ ನೀಡುವಲ್ಲಿ ಆಗಿರುವ ವಿಳಂಬದ ಬಗ್ಗೆ ಡಿಆರ್‍ಡಿಓ ಮಾಜಿ ಮುಖ್ಯಸ್ಥ ವಿ.ಕೆ.ಸಾರಸ್ವತ್ ಅವರು ನೀಡಿದ ಹೇಳಿಕೆಯನ್ನು ನಾವು ನಂಬಬಹುದು. ಅದರೆ ಕ್ಲಿಯರೆನ್ಸ್ ನೀಡಲು ವಿಳಂಬ ಮಾಡಿದ್ದಕ್ಕೆ ಪ್ರಬಲ ಕಾರಣಗಳಿರಬೇಕು" ಎಂದು ಸ್ಪಷ್ಟಪಡಿಸಿದರು.

ದೋಷಗಳ ಸಾಧ್ಯತೆಯನ್ನು ಕೂಡಾ ಪರಿಗಣಿಸಬೇಕು ಎಂದು ನಂಬಿಯಾರ್ ಅಭಿಪ್ರಾಯಟ್ಟರು. "ಸಂಭಾವ್ಯ ಪ್ರಮಾದಗಳನ್ನು ಎದುರಿಸಲು ಸಮಯ ಅಗತ್ಯ. ಈ ಕಾರಣದಿಂದ 2012ರಲ್ಲಿ ಸರ್ಕಾರ ಕ್ಲಿಯರೆನ್ಸ್ ನೀಡಿರಲಿಕ್ಕಿಲ್ಲ" ಎಂದು ಹೇಳಿದರು.

ಪ್ರಮಾದದ ಸಾಧ್ಯತೆ ಬಗ್ಗೆ ಉಲ್ಲೇಖಿಸಿದ ಅವರು, ಗುರಿ ನಿರ್ದೇಶನ ಮಾಡಿದ ಉಪಗ್ರಹದ ಬದಲಾಗಿ ಬೇರೆ ಉಪಗ್ರಹವನ್ನು ಅದು ಹೊಡೆದುರುಳಿಸುವ ಸಾಧ್ಯತೆಯೂ ಇದೆ. "ಇದು ಲೆಕ್ಕಾಚಾರದ ಯೋಜನೆ. ಧ್ವಂಸಗೊಳಿಸಬೇಕಾದ ಉಪಗ್ರಹವನ್ನು ನಾವು ಪಡೆಯಬೇಕು. ಉಪಗ್ರಹವನ್ನು ಹೊಡೆಯುವುದು ನಾವು ಉಡಾಯಿಸುವ ಕ್ಷಿಪಣಿಗೆ ಸಂಬಂಧಿಸಿರುತ್ತದೆ. ನಾವು ಉಡಾಯಿಸುವ ಎಲ್ಲ ರಾಕೆಟ್‍ಗಳು ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ, ಈ ಯೋಜನೆ ಕೂಡಾ ಯಶಸ್ವಿಯಾಗಬಹುದು ಎಂದು ನಿರೀಕ್ಷಿಸಬಹುದು. ಯಾವುದೇ ಕ್ಷಣದಲ್ಲಿ ರಾಕೆಟ್ ವಿಫಲವಾಗಬಹುದು ಅಥವಾ ಬೇರೆ ಕಕ್ಷೆಗೆ ಹೋಗಬಹುದು. ಕೆಲವೊಮ್ಮೆ ನಾವು ಉಡಾಯಿಸಿದ ಕ್ಷಿಪಣಿ ಬೇರೆ ಉಪಗ್ರಹವನ್ನು ಹೊಡೆದುರುಳಿಸಬಹುದು. ಸಂವಹನ ಉಪಗ್ರಹಕ್ಕೆ ತಪ್ಪಾಗಿ ಈ ಕ್ಷಿಪಣಿ ದಾಳಿ ಮಾಡಿದರೆ, ಈ ತಪ್ಪು ದೊಡ್ಡ ಪ್ರಮಾದವಾಗಬಹುದು" ಎಂದು ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News