×
Ad

ಲಾರಿ, ಕಾರು ಢಿಕ್ಕಿ: ಕೊಡಗರಹಳ್ಳಿಯಲ್ಲಿ ಇಬ್ಬರ ಸಾವು

Update: 2019-03-31 19:18 IST

ಮಡಿಕೇರಿ, ಮಾ.31 :ಕಾಂಕ್ರಿಟ್ ಮಿಶ್ರಣ ಕೊಂಡೊಯ್ಯವ ಲಾರಿ ಹಾಗೂಕಾರು ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ  ಕಾರಿನಲ್ಲಿದ್ದ ಇಬ್ಬರು ಸಾವಿಗೀಡಾದ ಘಟನೆ ಇಲ್ಲಿಗೆ ಸಮೀಪದ ಕೊಡಗರಹಳ್ಳಿಯ ಮಾರುತಿ ನಗರ ಬಳಿ ನಡೆದಿದೆ.

ಸುಂಟಿಕೊಪ್ಪ ಕಡೆಯಿಂದ ಕುಶಾಲನಗರಕ್ಕೆ ತೆರಳುತ್ತಿದ್ದ ಕಾಂಕ್ರಿಟ್ ಮಿಶ್ರಣ ಸಾಗಿಸುವ ಲಾರಿ(ಕೆಎ12 ಬಿ 4678)  ಕುಶಾಲನಗರ ಕಡೆಯಿಂದ ಕೊಡಗರಹಳ್ಳಿಗೆ ಆಗಮಿಸುತ್ತಿದ್ದ (ಕೆಎ 12 ಬಿ 767) ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇರ್ಫಾನ್(26) ಎಂಬವರು  ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.  ಸಹ ಪ್ರಯಾಣಿಕ ಸಮದ್ ಎಂಬವರು ತೀವ್ರವಾಗಿ ಗಾಯಗೊಂಡಿದ್ದು,  ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ  ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ  ಕರೆದೊಯ್ಯುವಾಗ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ.

ಸಾರ್ವಜನಿಕರ ಆಕ್ರೋಶ: ರಾಷ್ಟ್ರೀಯ ಹೆದ್ದಾರಿಯಲ್ಲಿ  ಕಾಂಕ್ರಿಟ್ ಮಿಶ್ರಣ ತುಂಬಿದ ಲಾರಿ, ಟಿಪ್ಪರ್ ಲಾರಿಗಳು ಅತಿವೇಗದಿಂದ ಸಂಚರಿಸುತ್ತಿವೆ. ಚಾಲಕರ ಅಜಾಗರೂಕತೆ ಚಾಲನೆ, ಅತೀವೇಗದ ಪರಿಣಾಮ ಹೆದ್ದಾರಿಯಲ್ಲಿ ಇತರ ವಾಹನಗಳ ನಡುವೆ ನಿತ್ಯ ಅಪಘಾತಗಳು ಸಂಭವಿಸುತ್ತಿವೆ. ಅಪಘಾತ ಸಂದರ್ಭ ಹಲವು ಸಾವು ನೋವುಗಳೂ ಸಂಭವಿಸುತ್ತಿದ್ದು, ಪೊಲೀಸ್ ಹಾಗೂ ಸಾರಿಗೆ ಇಲಾಖಾಧಿಕಾರಿಗಳು ಅಧಿಕಾರಿಗಳು ಈ ವಾಹನಗಳ ವೇಗಕ್ಕೆ ಕಡಿವಾಣ ಹಾಕಬೇಕು. ಎಲ್ಲಾ ವಾಹನಗಳ ದಾಖಲಾತಿ ತಪಾಸಣೆ ನಡೆಸುವ ಮೂಲಕ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News