ಕೋಲಾರ ಲೋಕಸಭಾ ಕ್ಷೇತ್ರದಲ್ಲಿ 14 ಮಂದಿ ಕಣದಲ್ಲಿರುವ ಅಭ್ಯರ್ಥಿಗಳಲ್ಲಿ ಯಾರಿಗೆ ಯಾವ ಚಿಹ್ನೆ?

Update: 2019-03-31 16:00 GMT

ಕೋಲಾರ: ಕೋಲಾರ ಲೋಕಸಭಾ ಚುನಾವಣಾ ಕಣದಲ್ಲಿ ಅಂತಿಮವಾಗಿ 14 ಮಂದಿ ಉಳಿದುಕೊಂಡಿದ್ದು, ಪ್ರತಿಯೊಬ್ಬ ಅಭ್ಯರ್ಥಿಗೂ ಚಿಹ್ನೆಯನ್ನು ನೀಡಿ ಚುನಾವಣಾ ಆಯೋಗ ಪ್ರಕಟಣೆ ಹೊರಡಿಸಿದೆ.

ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ಎಂ.ಜಿ.ಜಯಪ್ರಸಾದ್‍ರಿಗೆ ಆನೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಕೆ.ಹೆಚ್.ಮುನಿಯಪ್ಪರಿಗೆ ಹಸ್ತ ಹಾಗೂ ಭಾರತೀಯ ಜನತಾ ಪಕ್ಷದ ಎಸ್ ಮುನಿಸ್ವಾಮಿರಿಗೆ ಕಮಲದ ಗುರುತು ದೊರೆತಿದೆ.

ಅಂಬೇಡ್ಕರ್ ಸಮಾಜ ಪಕ್ಷದ ಎಂ.ಬಿ.ಅಶೋಕರಿಗೆ ಕಬ್ಬಿನ ಜಳ್ಳೆಯೊಂದಿಗೆ ಇರುವ ರೈತ, ರಿಪಬ್ಲಿಕನ್ ಸೇನಾ ಪಕ್ಷದ ಜಿ.ಚಿಕ್ಕನಾರಾಯಣರಿಗೆ ಹೊಲಿಗೆ ಯಂತ್ರ, ಉತ್ತಮ ಪ್ರಜಾಕೀಯ ಪಕ್ಷದ ಆರ್.ರಾಮಾಂಜಿನಪ್ಪರಿಗೆ ಆಟೋ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಎ)ವೆಂಕಟೇಶಪ್ಪರಿಗೆ ಟಿವಿ, ಪಿರಮಿಡ್ ಪಾರ್ಟಿ ಆಫ್ ಇಂಡಿಯಾದ ಎನ್.ಎಂ.ಸರ್ವೇಶರಿಗೆ ಅನಾನಸ್ ಚಿಹ್ನೆ ದೊರೆತಿದೆ.

ಪಕ್ಷೇತರ ಅಭ್ಯರ್ಥಿಗಳಾದ ಮೇಡಿಹಾಳ ಛಲವಾದಿ ಎಂ.ಚಂದ್ರಶೇಖರ್‍ರಿಗೆ ಕಪ್ ಮತ್ತು ಸಾಸರ್, ಪಿ.ಮುನಿರಾಜಪ್ಪ ಅವರಿಗೆ ತೆಂಗಿನತೋಟ, ಡಾ. ವಿ.ಎಂ.ರಮೇಶ್ ಬಾಬುರಿಗೆ ಗ್ಯಾಸ್ ಸಿಲಿಂಡರ್, ಎಲ್.ರಾಜ್ ಕುಮರೇಸನ್‍ರಿಗೆ ಪುಟ್‍ಬಾಲ್, ಸಿ.ಶಂಕರಪ್ಪರಿಗೆ ಕಲ್ಲಂಗಡಿ, ಎನ್.ಸಿ.ಸುಬ್ಬರಾಯಪ್ಪರಿಗೆ ಟ್ರಾಕ್ಟರ್ ಚಲಾಯಿಸುತ್ತಿರುವ ರೈತನ ಗುರುತು ಸಿಕ್ಕಿದೆ.

ಈ ಎಲ್ಲಾ 14 ಮಂದಿ ಅಭ್ಯರ್ಥಿಗಳು ತಮಗೆ ದೊರೆತಿರುವ ಕ್ರಮ ಸಂಖ್ಯೆ ಮತ್ತು ಚಿಹ್ನೆಯನ್ನು ಆಧಾರವಾಗಿಟ್ಟುಕೊಂಡು ಪ್ರಚಾರಕ್ಕಿಳಿಯಲಿದ್ದಾರೆ. ಈ ಬಾರಿ ಚಿಹ್ನೆ ಹೆಸರಿನ ಜೊತೆಗೆ ಮತಯಂತ್ರದಲ್ಲಿ ಅಭ್ಯರ್ಥಿಯ ಭಾವಚಿತ್ರವೂ ಪ್ರಕಟವಾಗಲಿದೆ. ಇವರುಗಳು ಏಪ್ರಿಲ್ 18 ರಂದು ಚುನಾವಣೆ ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News