ಗ್ರಾಹಕರೇ ಗಮನಿಸಿ....ಎಪ್ರಿಲ್‌ನಲ್ಲಿ ಬ್ಯಾಂಕ್‌ಗಳಿಗೆ ಸಾಲು ಸಾಲು ರಜೆ
Update: 2019-04-01 22:22 IST
ಬೆಂಗಳೂರು, ಎ.1: ಎಪ್ರಿಲ್ ತಿಂಗಳಿನಲ್ಲಿ ಒಂದರ ಹಿಂದೊಂದು ರಜೆಗಳು ಬಂದಿರುವ ಕಾರಣ ಒಟ್ಟು 9 ದಿನ ಬ್ಯಾಂಕ್ ರಜೆ ಇರಲಿದೆ.
ಎ.6ರಂದು ಯುಗಾದಿ ಹಬ್ಬದ ರಜೆ. ಎ.7ರಂದು ರವಿವಾರ. ಎ.13ರಂದು ರಾಮ ನವಮಿ ಮತ್ತು 2ನೇ ಶನಿವಾರ ಬ್ಯಾಂಕ್ ರಜೆ. ಎ.14ರಂದು ರವಿವಾರ, ಅಂಬೇಡ್ಕರ್ ಜಯಂತಿ ರಜೆ. ಎ.17ರಂದು ಮಹಾವೀರ ಜಯಂತಿ ರಜೆ. ಎ.19ರಂದು ಗುಡ್ ಫ್ರೈಡೇ ರಜೆ. ಎ.21ರಂದು ರವಿವಾರ. ಏಪ್ರಿಲ್ 27ರಂದು 4ನೇ ಶನಿವಾರ ಬ್ಯಾಂಕ್ ರಜೆ ಹಾಗೂ ಎ.28ರಂದು ರವಿವಾರ ಇದೆ.
ಈ ಎಲ್ಲಾ ದಿನಗಳಲ್ಲಿ ಬ್ಯಾಂಕ್ ರಜೆ ಇರುವುದರಿಂದ ಅಗತ್ಯವಿರುವ ಗ್ರಾಹಕರು ಹಣಕ್ಕಾಗಿ, ಬ್ಯಾಂಕ್ ವ್ಯವಹಾರಗಳಿಗೆ ಮುಂಚಿತವಾಗಿ ಯೋಜನೆ ರೂಪಿಸಿಕೊಳ್ಳುವುದು ಉತ್ತಮ.