×
Ad

ಕೊಲೆ ಆರೋಪಿ ಸಂಘದ ಸದಸ್ಯನಲ್ಲ: ಮಡಿಕೇರಿ ತಾಲೂಕು ಲಾರಿ ಮಾಲಕರು, ಚಾಲಕರ ಸ್ಪಷ್ಟನೆ

Update: 2019-04-02 17:36 IST

ಮಡಿಕೇರಿ,ಎ.2: ಇತ್ತೀಚೆಗೆ ಸುಪಾರಿ ಕೊಲೆ ಆರೋಪದಡಿ ಬಂಧಿತನಾಗಿರುವ ಲಾರಿ ಚಾಲಕ, ಬೊಳ್ಳೂರು ಗುಡ್ಡೆಹೊಸೂರು ನಿವಾಸಿ ಜಯನ್ ಎಂಬಾತ ಮಡಿಕೇರಿ ತಾಲೂಕು ಲಾರಿ ಮಾಲಕರ ಮತ್ತು ಚಾಲಕರ ಸಂಘದ ಸದಸ್ಯನಲ್ಲ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಸಂಘದ ಅಧ್ಯಕ್ಷ ಕೆ.ಕೆ.ಶಿವ ಹಾಗೂ ಕಾರ್ಯದರ್ಶಿ ಎಂ.ಶ್ರೀನಿವಾಸ್ ಸಂಘಕ್ಕೂ ಕೊಲೆ ಆರೋಪಿ ಜಯನ್‍ಗೂ ಯಾವುದೇ ಸಂಬಂಧವಿರುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. 

ಸಂಘ ಕಳೆದ ಅನೇಕ ವರ್ಷಗಳಿಂದ ಜನಪರ ಹಾಗೂ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ, ಅಲ್ಲದೆ ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವ ಮೂಲಕ ದೇಶಪ್ರೇಮವನ್ನು ಮೆರೆದಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News