×
Ad

ಸುಮಲತಾ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ ಸಂಸದ ಶಿವರಾಮೇಗೌಡ

Update: 2019-04-02 22:10 IST

ಮಂಡ್ಯ, ಎ.1: ಲೋಕಸಭೆ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಷ್ ಜಾತಿ ಕೆಣಕುವ ಮೂಲಕ ವಿವಾದ ಎಳೆದುಕೊಂಡಿರುವ ಸಂಸದ ಎಲ್.ಆರ್.ಶಿವರಾಮೇಗೌಡ, ಸುಮಲತಾ, ದಿವಂಗತ ಅಂಬರೀಷ್ ಮತ್ತು ಅವರ ನೆರವಿಗೆ ನಿಂತಿರುವ ಚಿತ್ರನಟರ ವಿರುದ್ಧ ನಾಲಗೆ ಹರಿಯಬಿಟ್ಟಿದ್ದಾರೆ.

ನಾಗಮಂಗಲ ವಿಧಾನಸಭಾ ಕ್ಷೇತ್ರದ ಕೊಪ್ಪ ಗ್ರಾಮದಲ್ಲಿ ಮಂಗಳವಾರ ನಡೆದ ಜೆಡಿಎಸ್ ಪ್ರಚಾರ ಸಭೆಯಲ್ಲಿ ತನ್ನ ಟೀಕಾಪ್ರಹಾರ ಮುಂದುವರಿಸಿದ ಶಿವರಾಮೇಗೌಡ, ಆಗ ಗೌರಮ್ಮನ ಹಾಗೆ ಮನೆಯಲ್ಲಿದ್ದು, ಈಗ ಬಂದವಳೆ ಈಯಮ್ಮ ಎಂದು ಹೀಯಾಳಿಸಿದ್ದಾರೆ.

ಅಂಬರೀಷ್ ವಸತಿ ಸಚಿವರಾಗಿದ್ದಾಗ ಬಡವರಿಗೆ ಯಾಕೆ ಮನೆ ಕೊಡಿಸಲಿಲ್ಲ ಎಂದು ಪ್ರಶ್ನಿಸಿದ್ದಲ್ಲದೆ, ಸುಮಲತಾರನ್ನು ಏಕ ವಚನದಲ್ಲಿ ಟೀಕಿಸಿದರು. ಅಂಬರೀಷ್ ನಂಬಿಕೊಂಡೆ 20 ವರ್ಷ ಹಾಳು ಮಾಡ್ಕೊಂಡೆ ನಾನು. ಅಧಿಕಾರ ವಂಚಿತರಾಗಿ ಕೂರಲು ಈ ಪುಣ್ಯಾತ್ಮನ ಪಾರ್ಟಿಗೆ ಕರೆತಂದದ್ದೇ ಕಾರಣ ಎಂದು ಟೀಕಿಸಿದರು.

ಅವನಾರೋ ರಾಕ್‍ಲೈನ್ ಅಂತೆ, ಆಮೇಲೆ ಅವರನ್ನು ನೋಡಲು ಗಾಂಧಿನಗರಕ್ಕೆ ಹೋಗಬೇಕಾಗುತ್ತೆ. ಹುಡುಕಲು ನೀವೆಲ್ಲಾ ಅಲ್ಲಿಗೆ ಹೋಗ್ತಿರಾ? ಈ ಟೂರಿಂಗ್ ಟಾಕೀಸ್‍ನವರನ್ನು ಹದಿನೆಂಟನೆ ತಾರೀಕು ಪ್ಯಾಕ್ ಮಾಡಿಸಿ ಕಳಿಸಬೇಕು. ಶೂಟಿಂಗ್ ಮಾಡಿದ ಸಿನಿಮಾ ಎಲ್ಲವೂ ಬಿಡುಗಡೆ ಆಗಲ್ಲ, ಹಾಗೆಯೇ ಇದು. ಇವತ್ತು ದರ್ಶನ್ ಬಂದವನಲ್ಲ, ಅವನೂ ನಾಯ್ಡು, ಸುಮಲತಾ ನಾಯ್ಡು, ರಾಕ್‍ಲೈನ್ ವೆಂಕಟೇಶ್ ಕೂಡ ನಾಯ್ಡು. ಮಂಡ್ಯವನ್ನು ನಾಯ್ಡುಮಯ ಮಾಡಲು ಬಿಡಬಾರದು ಎಂದು ಅವರು ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News