×
Ad

ಪರವಾನಗಿ ಇಲ್ಲದೆ ಕರಪತ್ರ ಸಾಗಿಸುತ್ತಿದ್ದ ಕಾರು ವಶ

Update: 2019-04-03 22:28 IST

ಮಂಡ್ಯ, ಎ.3: ಪರವಾನಗಿ ಇಲ್ಲದೆ ಕರಪತ್ರ ಸಾಗಿಸುತ್ತಿದ್ದ ಕಾರನ್ನು ಚುನಾವಣಾಧಿಕಾರಿಗಳು ನಾಗಮಂಗಲ ತಾಲೂಕಿನ ಕದಬಹಳ್ಳಿ ತಪಾಸಣಾ ಕೇಂದ್ರದ ಬಳಿ ವಶಕ್ಕೆ ಪಡೆದುಕೊಂಡಿದ್ದಾರೆ.

ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ. ಮಂಜು ಅವರ 5 ಸಾವಿರ ಕರಪತ್ರಗಳನ್ನು ಹೊಂದಿದ್ದ ಕಾರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.

ಪರವಾನಗಿ ಇಲ್ಲದ ಕಾರು ಪೊಲೀಸರ ವಶದಲ್ಲಿದ್ದು, ಬಿಂಡಿಗನವಿಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News