×
Ad

ದೇಶ 5 ವರ್ಷದಲ್ಲಿ ಹೀನಾಯ ಸ್ಥಿತಿಗೆ ತಲುಪಿದೆ: ಮಾಜಿ ಪ್ರಧಾನಿ ದೇವೇಗೌಡ

Update: 2019-04-03 23:04 IST

ಸಕಲೇಶಪುರ,ಎ.3: ದೇಶದ ಭವಿಷ್ಯದ ದಿನಗಳನ್ನು ನೆನೆಸಿಕೊಂಡರೆ ನನಗೆ ನಿದ್ದೆ ಬರುವುದಿಲ್ಲ. ಕಳೆದ 5 ವರ್ಷಗಳಲ್ಲಿ ದೇಶ ಹೀನಾಯ ಸ್ಥಿತಿಗೆ ತಲುಪಿದೆ  ಎಂದು ಮೋದಿ ಸರಕಾರದ ಆಡಳಿತವನ್ನು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಕಟುವಾಗಿ ಟೀಕಿಸಿದರು.

ಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಸಾರ್ವಜನಿಕ ಪ್ರಚಾರ ನಡೆಸಿ ಮಾತನಾಡಿದ ಅವರು, ಬಲಿಷ್ಟ ಭಾರತ ಕಳೆದ 5 ವರ್ಷಗಳಲ್ಲಿ ದುರ್ಬಲವಾಯಿತು ಎಂದು ವಿಷಾಧಿಸಿದರು.

ಬಡವರ ಬದುಕು ಸಂಕಷ್ಟದಲ್ಲಿದೆ. ಈ ಸ್ಥಿತಿ ಮುಂದುವರಿದರೆ ಜನರ ಸ್ಥಿತಿ ಚಿಂತಾಜನಕವಾಗುತ್ತದೆ. ಒಂದು ವರ್ಗವನ್ನು ದ್ವೇಷಿಸುತ್ತಾ ಅಧಿಕಾರವನ್ನು ಕೈಗೆತ್ತುಕೊಳ್ಳಲು ಬಿಜೆಪಿ ಮುಂದಾಗುತ್ತಿದೆ ಎಂದರು.

ದೇಶದಲ್ಲಿ ಎಲ್ಲಾ ಜಾತ್ಯಾತೀತ ಶಕ್ತಿಗಳು ಕೋಮುವಾದಿ ಶಕ್ತಿಗಳನ್ನು ಸದೆಬಡಿಯಲು ಒಂದಾಗಿವೆ. ಎಲ್ಲರೂ ಜೆಡಿಎಸ್ ಅಭ್ಯರ್ಥಿ ಪ್ರಚ್ವಲ್ ರೇವಣ್ಣ ರವರಿಗೆ ಮತ ನೀಡಬೇಕು ಎಂದರು.

ಶಾಸಕ ಎಚ್.ಕೆ ಕುಮಾರಸ್ವಾಮಿ, ಕಾಂಗ್ರೆಸ್ ಮುಖಂಡ ಸಲ್ಲಿಂಕೊಲ್ಲಹಳ್ಳಿ ಮಾತನಾಡಿದರು. ವೇದಿಕೆಯಲ್ಲಿ ಕಾಂಗ್ರೆಸ್ ಮುಖಂಡ ಸಿದ್ದಯ್ಯ, ಡಿಸಿ ಸಣ್ಣಸ್ವಾಮಿ, ಯಜಮಾನ್ ಗೌಡ, ದೋಡ್ಡದೀಣೆ ಸ್ವಾಮಿ, ಇಬ್ರಾಹಿ ಯಾದ್ಗಾರ್ ಸೇರಿ ಅನೇಕರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News