30 ಲಕ್ಷ ವರ್ಷದಲ್ಲೇ ಇಂಗಾಲದ ಡೈ ಆಕ್ಸೈಡ್ ಅಧಿಕ: ಅಧ್ಯಯನ

Update: 2019-04-05 17:25 GMT

ಲಂಡನ್, ಎ. 5: ವಾತಾವರಣದಲ್ಲಿ ಜಾಗತಿಕ ತಾಪಮಾನಕ್ಕೆ ಕಾರಣವಾಗುವ ಇಂಗಾಲದ ಡೈ ಆಕ್ಸೈಡ್ (ಸಿಒ2) ಪ್ರಮಾಣವು ಕಳೆದ 30 ಲಕ್ಷ ವರ್ಷಗಳಲ್ಲೇ ಇಂದು ಹೆಚ್ಚಿನ ಪ್ರಮಾಣದಲ್ಲಿದೆ ಎಂದು ಅಧ್ಯಯನವೊಂದು ತಿಳಿಸಿದೆ.

ಜರ್ಮನಿಯ ಪೋಟ್ಸ್‌ಡಾಮ್ ಇನ್‌ಸ್ಟಿಟ್ಯೂಟ್ ಫಾರ್ ಕ್ಲೈಮೇಟ್ ಇಂಪ್ಯಾಕ್ಟ್ ರಿಸರ್ಚ್‌ನ ವಿಜ್ಞಾನಿಗಳು ಮೊದಲ ಬಾರಿಗೆ, ಕಳೆದ 30 ಲಕ್ಷ ವರ್ಷಗಳ ಅವಧಿಯಲ್ಲಿನ ವಾತಾವರಣ ವಿಕಾಸಕ್ಕೆ ಸಂಬಂಧಿಸಿದ ಸಾಗರ ತಳ ಗಸಿ (ಓಶನ್ ಫ್ಲೋರ್ ಸೆಡಿಮೆಂಟ್)ಗೆ ಹೊಂದುವ ಕಂಪ್ಯೂಟರ್ ಮಾದರಿಯೊಂದನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶೀತಲ ಯುಗದ ಆರಂಭಗೊಳ್ಳಲು ಹಾಗೂ ನೀರ್ಗಲ್ಲುಗಳು ಶೀತಲದಿಂದ ಬೆಚ್ಚಗೆ ಹಾಗೂ ಬೆಚ್ಚಗಿಂದ ಶೀತಲಕ್ಕೆ ಪರಿವರ್ತನೆಯಾಗಲು ಇಂಗಾಲದ ಡೈ ಆಕ್ಸೈಡ್ ಮಟ್ಟ ಕುಸಿದಿರುವುದೇ ಪ್ರಮುಖ ಕಾರಣವಾಗಿತ್ತು ಎನ್ನುವುದು ಅಧ್ಯಯನದಲ್ಲಿ ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News