×
Ad

ಎರಡು ಪ್ರತ್ಯೇಕ ಪ್ರಕರಣ: ಮೂವರು ಯುವಕರು ನೀರು ಪಾಲು

Update: 2019-04-07 18:55 IST

ಚಾಮರಾಜನಗರ,ಎ.7: ಎರಡು ಪ್ರತ್ಯೇಕ ಪ್ರಕರಣದಲ್ಲಿ ಕೆರೆ ನೀರಿನಲ್ಲಿ ಈಜಲು ಹೋಗಿದ್ದ ಮೂವರು ಯುವಕರು ನೀರು ಪಾಲಾದ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ರವಿವಾರ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಸಮೀಪದ ಹುತ್ತೂರು ಕೆರೆ ಮತ್ತು ತಮ್ಮಡಹಳ್ಳಿ ಕೆರೆಯಲ್ಲಿ ದುರ್ಘಟನೆ ನಡೆದಿದೆ.

ಹುತ್ತೂರು ಕೆರೆಯಲ್ಲಿ ಉಡಿಗಾಲ ಗ್ರಾಮದ ಕಿರಣ್(16) ಎಂಬ ವಿದ್ಯಾರ್ಥಿ ಈಜಲು ಹೋಗಿ ಸಾವನ್ನಪ್ಪಿದ್ದ ಘಟನೆ ನಡೆದಿದ್ದು, ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಘಟನೆ ನಡೆದು ಕೆಲವೇ ಸಮಯದೊಳಗೆ ತಮ್ಮಡಹಳ್ಳಿ ಕೆರೆಯಲ್ಲಿ ಗುಂಡ್ಲುಪೇಟೆ ಪಟ್ಟಣ ಕೆಲವು ಯುವಕರು ಈಜಲು ಬಂದಿದ್ದು, ಅವರಲ್ಲಿ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಮೃತರು ಗುಂಡ್ಲುಪೇಟೆ ಪಟ್ಟಣದ ಆಚಾರ್ ಬೀದಿಯ ಅಣ್ಣ-ತಮ್ಮಂದಿರು ಎಂದು ಹೇಳಲಾಗಿದ್ದು, ಮೃತದೇಹವನ್ನು ಕೆರೆಯಿಂದ ಗ್ರಾಮಸ್ಥರ ಸಹಾಯದಿಂದ ಹೊರ ತೆಗೆಯಲಾಗಿದೆ. ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News