×
Ad

ದೇವಾಲಯದ ಗರ್ಭಗುಡಿಯಲ್ಲೇ ರೌಡಿಶೀಟರ್ ಕೊಲೆ

Update: 2019-04-07 22:32 IST

ಮಂಡ್ಯ, ಎ.7: ಹಳೇ ದ್ವೇಷದ ಹಿನ್ನೆಲೆಯಲ್ಲಿ ರೌಡಿಶೀಟರ್ ನನ್ನು ಅಟ್ಟಾಡಿಸಿ ದೇವಾಲಯದ ಗರ್ಭಗುಡಿಯೊಳಗೆ ಮಚ್ಚಿನಿಂದ ಹಲ್ಲೆ ಮಾಡಿ ಚಾಕುವಿನಿಂದ ಇರಿದು ಕೊಲೆಗೈದಿರುವ ಘಟನೆ ನಗರದ ಗುತ್ತಲು ಬಡಾವನೆಯಲ್ಲಿ ಶನಿವಾರ ನಡೆದಿದೆ.

ಅರ್ಕೇಶ್ವರನಗರದ ಸಿದ್ದಪ್ಪ ಎಂಬುವರ ಪುತ್ರ ನಂದನ್‍ಕುಮಾರ್ (26) ಹತ್ಯೆಯಾಗಿದ್ದು, ಮಾರುತಿ ನಗರ ನಿವಾಸಿ ಅಜಯ್, ಬಸವನಗುಡಿ ನಿವಾಸಿ ಚಂದನ್ ಸೇರಿ 6 ಜನರ ಗುಂಪು ಕೊಲೆ ಮಾಡಿ ತಲೆ ಮರೆಸಿಕೊಂಡಿದೆ ಎನ್ನಲಾಗಿದೆ. ಕೊಲೆ ಮಾಡಿದ ಆರೋಪಿಗಳ ಎರಡು ಬೈಕ್, ಒಂದು ಮೊಬೈಲ್ ಸ್ಥಳದಲ್ಲಿ ಸಿಕ್ಕಿದ್ದು, ಪೊಲೀಸರು ವಶಪಡಿಸಿಕೊಂಡಿದ್ದಾರೆ.

ನಂದನ್ ಕುಮಾರ್ ಹಾಗೂ ಕೊಲೆ ಆರೋಪಿಗಳು ಸ್ನೇಹಿತರು. ಮಧ್ಯಾಹ್ನ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿತ್ತು. ಈ ವೇಳೆ ನಂದನ್ ಕುಮಾರ್ ಓರ್ವನ  ಮೇಲೆ ಹಲ್ಲೆ ಮಾಡಿದ್ದ ಎನ್ನಲಾಗಿದೆ. ಇದರಿಂದ ಕೋಪಗೊಂಡಿದ್ದ ಅಜಯ್ ಮತ್ತಿತರರು ಸೇರಿ ಸಂಜೆ 7.45ಕ್ಕೆ ನಂದನ್ ಕಾಳಮ್ಮನ ದೇವಾಲಯಕ್ಕೆ ಹೋಗಿದ್ದಾಗ ಅವನೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ. 8 ಗಂಟೆ ಆಸುಪಾಸಿನಲ್ಲಿ ಚಂದನ್ ಲಾಂಗ್ ತೆಗೆದುಕೊಂಡು ಆಕ್ಟೀವಾ ಹೊಂಡಾದಲ್ಲಿ ಬಂದಿದ್ದಾನೆ. ಬೆನ್ನಲ್ಲೇ ಅಜಯ್ ಮೊದಲಾದವರು ತಮ್ಮ ಬಳಿ ಇದ್ದ ಚಾಕು, ಲಾಂಗುಗಳನ್ನು ಎತ್ತಿಕೊಂಡು ನಂದನ್ ಮೇಲೆ ಮುಗಿಬಿದ್ದಿದ್ದಾರೆ.
ತಕ್ಷಣ ನಂದನ್ ದೇವಾಲಯದ ಒಳಗೆ ನುಗ್ಗಿ ಗರ್ಭಗುಡಿ ಒಳಗೆ ಅವಿತುಕೊಂಡಿದ್ದಾನೆ. ಅಲ್ಲಿಗೂ ನುಗ್ಗಿದ ಗುಂಪು ಚಾಕುವಿನಿಂದ ಇರಿದು, ಲಾಂಗ್ ನಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News