×
Ad

ಜೆಡಿಎಸ್‌ನಂತೆ ಬಿಜೆಪಿ ನಿಂಬೆಹಣ್ಣಿನ ಪಕ್ಷವಲ್ಲ: ಆರ್.ಅಶೋಕ್

Update: 2019-04-07 23:13 IST

ಬೆಂಗಳೂರು, ಎ.7: ಜೆಡಿಎಸ್ ಪಕ್ಷದಂತೆ ಬಿಜೆಪಿ ನಿಂಬೆಹಣ್ಣಿನ ಪಕ್ಷವಲ್ಲ. ಬದಲಾಗಿ ಜನರ ಅಭಿವೃದ್ಧಿಗೆ ಶ್ರಮಿಸುವ ಪಕ್ಷ ಎಂದು ಬಿಜೆಪಿ ಮುಖಂಡ ಆರ್.ಅಶೋಕ್ ಹೇಳಿದರು. 

ರವಿವಾರ ನಗರದ ಅರಮನೆ ಮೈದಾನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ನಿಂಬೆಹಣ್ಣಿನ ಪಕ್ಷವಲ್ಲ, ಸರಕಾರ ನಡೆಸುವ ಪಕ್ಷ. ಇನ್ನೂ, ಮೂಢನಂಬಿಕೆ-ಶಾಸ್ತ್ರದ ಪಕ್ಷವೂ ಅಲ್ಲ, ಜನ ಪರವಾದ ಪಕ್ಷ ಎಂದರು.

ಮಹಿಳೆ: ಒಬ್ಬ ಮಾಜಿ ಪ್ರಧಾನಿ, ಒಬ್ಬ ಮುಖ್ಯಮಂತ್ರಿ, ಮೂವರು ಮಂತ್ರಿಗಳು ಸೇರಿ ಒಂದು ಮಹಿಳೆಯನ್ನು ಎದುರಿಸುತ್ತಿದ್ದಾರೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ಕುರಿತು ಹೇಳಿದರು.

ಕೇಂದ್ರದ ಸಚಿವ ಡಿ.ವಿ.ಸದಾನಂದಗೌಡ ಮಾತನಾಡಿ, ಈ ಸಮ್ಮಿಶ್ರ ಸರಕಾರ ಶೇಕಡ 20ರಷ್ಟು ಕಮಿಷನ್ ಸರಕಾರವಾಗಿದ್ದು, ಇದರಲ್ಲಿ ಜೆಡಿಎಸ್ ಪಕ್ಷಕ್ಕೆ ಶೇ.10 ಮತ್ತು ಕಾಂಗ್ರೆಸ್‌ಗೆ ಶೇ.10 ಪಾಲು ಹೋಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಜನಪರ ಕಲ್ಯಾಣ ಕಾರ್ಯಕ್ರಮಗಳನ್ನು ಸಮರ್ಥವಾಗಿ ಅನುಷ್ಠಾನಗೊಳಿಸಿದೆ, ಭ್ರಷ್ಟಾಚಾರ ರಹಿತ ಆಡಳಿತ ನೀಡಿದೆ. ಹೀಗಾಗಿ, ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಲಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಸದ ಪಿ.ಸಿ.ಮೋಹನ್, ಶಾಸಕರಾದ ಅರವಿಂದ ಲಿಂಬಾವಳಿ, ಡಾ.ಸಿ.ಎನ್.ಅಶ್ವತ್ಥನಾರಾಯಣ, ರವಿಸುಬ್ರಮಣ್ಯ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News