×
Ad

ದಾಖಲೆ ಇಲ್ಲದೆ ಸಾಗಿಸುತ್ತಿದ್ದ 3.40 ಲಕ್ಷ ನಗದು ಜಪ್ತಿ

Update: 2019-04-07 23:47 IST

ವಿಜಯಪುರ,ಎ.7: ದಾಖಲೆ ಇಲ್ಲದೆ ಸಾಗಾಟ ಮಾಡುತ್ತಿದ್ದ ಹಣವನ್ನು ಪೊಲೀಸರು ಜಪ್ತಿ ಮಾಡಿದ ಘಟನೆ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಯಲಗೂರು ಚೆಕ್ ಪೊಸ್ಟ್ ಬಳಿ ನಡೆದಿದೆ. 

ಪಿಕಪ್ ವಾಹನದಲ್ಲಿ ಕೊಂಡೊಯ್ಯುತ್ತಿದ್ದ 3.40 ಲಕ್ಷ ರೂ. ಪೊಲೀಸರು ವಶಕ್ಕೆ ಪಡೆದಿದ್ದು, ದಾವಣಗೆರೆಯಿಂದ ವಿಜಯಪುರದ ಬಸವನಬಾಗೇವಾಡಿಗೆ ಹೊರಟಿದ್ದ ಪಿಕಪ್ ವಾಹನವನ್ನು ತಪಾಸಣೆ ಮಾಡುವಾಗ ಹಣ ಸಿಕ್ಕಿದೆ. ಸೂಕ್ತ ದಾಖಲೆ ಇಲ್ಲದ ಹಣ ವಶಕ್ಕೆ ಪಡೆದಿದ್ದು, ದಾಖಲೆ ನೀಡಿ ಹಣ ತೆಗೆದುಕೊಂಡು ಹೋಗಲು ನಿಡಗುಂದಿ ಸಿಪಿಐ ಶಿರಹಟ್ಟಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News