ಬಿಜೆಪಿಯು ಶ್ರೀಮಂತರ ಪಕ್ಷ: ಶಾಸಕ ನರೇಂದ್ರ

Update: 2019-04-08 11:52 GMT

ಹನೂರು: ಬಿಜೆಪಿಯು ಶ್ರೀಮಂತರ ಪಕ್ಷವಾಗಿದ್ದು ಕಳೆದ 5 ವರ್ಷದ ತನ್ನ ಆಡಳಿತದ ಅವಧಿಯಲ್ಲಿ ದೇಶದ ಬಡವರಿಗೆ ಜನಪರ ಯೋಜನೆಗಳನ್ನು  ರೂಪಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು ಮತ್ತು  ದೇಶವನ್ನು ಅಭಿವೃದ್ದಿ ಪಥದತ್ತ ಕೂಂಡ್ಯಯಬೇಕಾದ ಪ್ರಧಾನಿ ಮೋದಿ ತನ್ನ ಅವಧಿಯಲ್ಲಿ ಕೇವಲ ಪ್ರಚಾರಕಷ್ಟೇ ಸಿಮೀತಗೂಳಿಸಿ ಕಾಲಹರಣ ಮಾಡಿದ್ದಾರೆ ಎಂದು ಶಾಸಕ ನರೇಂದ್ರ ಆರೋಪಿಸಿದರು. 

ತಾಲೂಕಿನ ಬಂಡಳ್ಳಿ ಜಿಪಂ ವ್ಯಾಪ್ತಿಯ ಶಾಗ್ಯ, ಮಣಗಳ್ಳಿ, ಮಂಗಲ, ಚೆನ್ನಾಲಿಂಗನಹಳ್ಳಿ ಗ್ರಾಮಗಳಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಆರ್ ದ್ರುವನಾರಾಯಣ್ ಪರ ಮತಯಾಚನೆಯ ಬಳಿಕ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಕಳೆದ 5 ವರ್ಷದಲ್ಲಿ ಬಡವರನ್ನು ನಿರ್ಲಕ್ಷ್ಯ ಮಾಡಿ, ಶ್ರೀಮಂತರ ಪರವಾಗಿ ಕೆಲಸಮಾಡಿ ಶ್ರಿಮಂತರ ಪಕ್ಷವಾಗಿ ಮಾರ್ಪಟ್ಟಿದೆ ಎಂದರು.

ಈ ಚುನಾವಣೆ ದೇಶದ ಭವಿಷ್ಯವನ್ನು ರೂಪಿಸುವ ಚುನಾವಣೆಯಾಗಿದೆ. ಕಳೆದ 5 ವರ್ಷದ ಅವಧಿಯಲ್ಲಿ ದೇಶ ಅವನತಿಯತ್ತ ಸಾಗಿದೆ. ದೇಶದ ಸಂವಿಧಾನದ ಮೇಲೆ ಕೇಂದ್ರ ಸರ್ಕಾರಕ್ಕೆ ನಂಬಿಕೆಯಿಲ್ಲ. ಸಂವಿಧಾನ ವಿರುದ್ದವಾಗಿ ಕೇಂದ್ರ ಸಚಿವರೇ ಮಾತನಾಡುತ್ತಾರೆ. ರೈತರ ವಿಚಾರದಲ್ಲಿ ಸಕಾಲಕ್ಕೆ ಸ್ಪಂದಿಸದೇ ಚುನಾವಣೆಯ ಹೂಸ್ತಿಲಲ್ಲಿ ರೈತರ ಮೇಲೆ ಕಾಳಜಿ ತೋರಿಸುವ ನಾಟಕವಾಡಿ ಮತಗಳಿಸಲು ಗಿಮಿಕ್ ಮಾಡಿದ್ದಾರೆ. ಆದ್ದರಿಂದ ಬಡವರನ್ನು ಕೈಬಿಟ್ಟು ಮತ್ತು ರೈತರಿಗೆ ದ್ರೋಹ ಮಾಡಿದ ಬಿಜೆಪಿಗೆ ಮತದಾರರು ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ ಎಂದು ಮನವಿ ಮಾಡಿದರು.

ಇಂದಿನ ಯುವ ಜನಾಂಗ ಸಾಮಾಜಿಕ ಮಾದ್ಯಮಗಳಾದ ಪೇಸ್ ಬುಕ್, ಇನ್ಸ್ಟಾಗ್ರಾಂ, ವಾಟ್ಸ್ ಆಪ್ ಗಳಲ್ಲಿ ಭಿತ್ತರಿಸುವ ಪ್ರಚೋಧನಕಾರಿ, ಸುಳ್ಳು ಸುದ್ದಿಗಳನ್ನು ನಂಬಿ ಕಾಂಗ್ರೆಸ್ ಸರ್ಕಾರ ಏನನ್ನೂ ದೇಶಕ್ಕೆ ಮಾಡಿಲ್ಲ ಎಂದು ನಂಬುತ್ತಿರುವುದು ದುರದೃಷ್ಟಕರ ಸಂಗತಿ.  ಭಾರತ ಇತಿಹಾಸ ಕೆದಕಿದರೆ ಕಾಂಗ್ರೆಸ್ ಸಾಧನೆ ಏನು ಎಂದು ತಿಳಿಯುತ್ತದೆ. ಈಗಿನ ಭಾರತ ಬಲಿಷ್ಟವಾಗಿದೆ ಎಂದರೆ ಅದಕ್ಕೆ ಕಾಂಗ್ರೆಸ್ ಸರ್ಕಾರ ನೀಡಿದ ಯೋಜನೆ ಮತ್ತು ಕಾರ್ಯಕ್ರಮಗಳು ಕಾರಣ ಎಂದು ಹೇಳಿದರು.

ಇಂದಿರಾ ಗಾಂಧಿ ವೃದ್ದಾಪ್ಯ ಭತ್ಯೆ, ವಿಧವಾ ವೇತನ, 20 ಅಂಶಗಳ ಕಾರ್ಯಕ್ರಮ, ಬ್ಯಾಂಕಿಂಗ್ ವ್ಯವಸ್ಥೆಯನ್ನು ರಾಷ್ಟ್ರೀಕರಣಗೊಳಿಸಿದ್ದು, ಅಧಿಕಾರ ವಿಕೇಂದ್ರೀಕರಣಕ್ಕೆ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ತಂದಿದ್ದು, ಮಾಹಿತಿ ತಂತ್ರಜ್ಞಾನ, ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ, ಉಚಿತ ಮತ್ತು ಕಡ್ಡಾಯ ಶಿಕ್ಷಣ, ಆಹಾರ ಭಧ್ರತಾ ಖಾಯ್ದೆ ಮುಂತಾದ ಜನಪ್ರಿಯ ಯೋಜನೆಗಳ ಬಗ್ಗೆ ಯುವಜನರಿಗೆ ಮಾಹಿತಿ ನೀಡುವ ಅವಶ್ಯಕತೆ ಇದೆ ಎಂದು ಹೇಳಿದರು. 

ದೃವನಾರಾಯಣ್ ರವರು ದೇಶದಲ್ಲಿ 5 ಉತ್ತಮ ಸಂಸದರಲ್ಲಿ ಒಬ್ಬರು ಹಾಗೂ ಕರ್ನಾಟಕ ರಾಜ್ಯದಲ್ಲಿ ಒಂದನೆಯವರು. ಬಾಬಾ ಸಾಹೇಬ್ ಅಂಬೇಡ್ಕರ್ ರವರು ಹೇಳಿದಂತೆ ಶಿಕ್ಷಣ ಕೊಟ್ಟಾಗ ಅಭಿವೃದ್ದಿ ತಾನಾಗಿಯೇ ಆಗುತ್ತದೆ ಎಂದು ತಿಳಿದು ಚಾಮರಾಜನಗರದಲ್ಲಿ ವೈದ್ಯಕೀಯ, ಕೃಷಿ, ಆದರ್ಶ ಶಾಲೆಗಳು, ಮೊರಾರ್ಜಿ ಶಾಲೆ, ಏಕಲವ್ಯ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ಮುಂತಾದ ಶಾಲಾ ಕಾಲೇಜುಗಳನ್ನು ತಂದಿದ್ದು ಶಿಕ್ಷಣಕ್ಕೆ ಒತ್ತು ನೀಡಿದ್ದಾರೆ. ರಸ್ತೆ ಅಭಿವೃದ್ದಿ ಮತ್ತು ಸಮುದಾಯ ಭವನಗಳನ್ನು ತಂದಿದ್ದಾರೆ. ಸಂಸದರನ್ನು ಈ ಬಾರಿಯೂ ಮತ ಹಾಕಿ ಗೆಲ್ಲಿಸುವುದರ ಮುಖಾಂತರ ಇನ್ನು ಹೆಚ್ಚಿನ ಅಭಿವೃದ್ದಿ ಕೆಲಸಗಳನ್ನು ಮಾಡುವಂತೆ ಆಶಿರ್ವದಿಸಿ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಜಿಪಂ ಸದಸ್ಯೆ ಲೇಖಾರವಿಕುಮಾರ್, ಮಾಜಿ ಸದಸ್ಯ ಕೊಪ್ಪಾಳಿ ಮಹದೇವ,  ಚಾಮುಲ್ ಅದ್ಯಕ್ಷ ಗುರುಮಲ್ಲಪ್ಪ, ನಿರ್ದೇಶಕ ನಂಜುಂಡಸ್ವಾಮಿ, ತಾಪಂ ಅದ್ಯಕ್ಷ ರಾಜೇಂದ್ರ, ಸದಸ್ಯ ನಟರಾಜು, ಜವಾದ್‍ ಅಹಮದ್, ಮಾಜಿ ಅದ್ಯಕ್ಷ ರಾಜು, ಹನೂರು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಕೆಂಪಯ್ಯ, ರಾಮಾಪುರ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಈಶ್ವರ್, ಮುಖಂಡರಾದ ದೇವರಾಜ್, ಪುಟ್ಟರಾಜು. ಮಹದೇವಸ್ವಾಮಿ,(ಹೊಸರು) , ಶಾಹುಲ್‍ ಅಹಮದ್, ನಟರಾಜು, ಯೂತ್‍ ಕಾಂಗ್ರಸ್ ಅದ್ಯಕ್ಷ ರಾಯೀಲ್, ಉಪಾದ್ಯಕ್ಷ ಮಾದೇಶ್ ಉಪಸ್ಥಿತರಿದ್ದರು..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News