ರಾಜ್ಯದಲ್ಲಿ 58186 ಮತಗಟ್ಟೆಗಳ ಸ್ಥಾಪನೆ

Update: 2019-04-08 16:07 GMT

►ಸಖಿ ಮತಗಟ್ಟೆಗಳು 639  ►ಎಥ್ನಿಕ್ ಮತಗಟ್ಟೆಗಳು 39 ►ಅಂಗವಿಕಲರಿಗೆ ಸೇರಿದ 96 ಮತಗಟ್ಟೆಗಳಿವೆ.
ಬೆಂಗಳೂರು, ಎ.8: ರಾಜ್ಯದಲ್ಲಿ ನಡೆಯಲಿರುವ ಎರಡು ಹಂತದ ಲೋಕಸಭಾ ಚುನಾವಣೆಯಲ್ಲಿ 58,186 ಮತಗಟ್ಟೆಗಳಲ್ಲಿ, 5.10 ಕೋಟಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. ಮೊದಲ ಹಂತದಲ್ಲಿ 30,164 ಮತಗಟ್ಟೆಗಳು, 2ನೇ ಹಂತದಲ್ಲಿ 28,022 ಮತಗಟ್ಟೆಗಳಿವೆ. ಅದರಲ್ಲಿ 639 ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ.

ಮೊದಲ ಹಂತದಲ್ಲಿ ಚುನಾವಣೆ ನಡೆಯಲಿರುವ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 1837 ಮತಗಟ್ಟೆಗಳು, ಹಾಸನದಲ್ಲಿ 2,235 ಮತಗಟ್ಟೆಗಳು, ದಕ್ಷಿಣ ಕನ್ನಡದಲ್ಲಿ 1,861 ಮತಗಟ್ಟೆಗಳು, ಚಿತ್ರದುರ್ಗದಲ್ಲಿ 2,161 ಮತಗಟ್ಟೆಗಳು, ತುಮಕೂರಿನಲ್ಲಿ 1,907 ಮತಗಟ್ಟೆಗಳು, ಮಂಡ್ಯದಲ್ಲಿ 2,046 ಮತಗಟ್ಟೆಗಳು, ಮೈಸೂರು 2,187 ಮತಗಟ್ಟೆಗಳು, ಚಾಮರಾಜನಗರ 2,005 ಮತಗಟ್ಟೆಗಳು, ಬೆಂಗಳೂರು ಗ್ರಾಮಾಂತರ 2,672 ಮತಗಟ್ಟೆಗಳು, ಬೆಂಗಳೂರು ಉತ್ತರ 2,652 ಮತಗಟ್ಟೆಗಳು, ಬೆಂಗಳೂರು ಕೇಂದ್ರ 2,082 ಮತಗಟ್ಟೆಗಳು, ಬೆಂಗಳೂರು ದಕ್ಷಿಣ 2,131 ಮತಗಟ್ಟೆಗಳು, ಚಿಕ್ಕಬಳ್ಳಾಪುರ 2,284 ಮತಗಟ್ಟೆಗಳು ಹಾಗೂ ಕೋಲಾರದಲ್ಲಿ 2,100 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಎರಡನೇ ಹಂತದಲ್ಲಿ ಚಿಕ್ಕೋಡಿ 1,885 ಮತಗಟ್ಟೆಗಳು, ಬೆಳಗಾವಿ 2,064 ಮತಗಟ್ಟೆಗಳು, ಬಾಗಲಕೋಟೆ 1,938 ಮತಗಟ್ಟೆಗಳು, ಬಿಜಾಪುರ 2,101 ಮತಗಟ್ಟೆಗಳು, ಗುಲಬರ್ಗಾ 2,157 ಮತಗಟ್ಟೆಗಳು, ರಾಯಚೂರು 2,184 ಮತಗಟ್ಟೆಗಳು, ಬೀದರ್ 1,999 ಮತಗಟ್ಟೆಗಳು, ಕೊಪ್ಪಳ 2,033 ಮತಗಟ್ಟೆಗಳು, ಬಳ್ಳಾರಿ 1,925 ಮತಗಟ್ಟೆಗಳು, ಹಾವೇರಿ 1,975 ಮತಗಟ್ಟೆಗಳು, ಧಾರವಾಡ 1,872 ಮತಗಟ್ಟೆಗಳು, ಉತ್ತರ ಕನ್ನಡ 1,922 ಮತಗಟ್ಟೆಗಳು, ದಾವಣಗೆರೆ 1,949 ಮತಗಟ್ಟೆಗಳು ಹಾಗೂ ಶಿವಮೊಗ್ಗದಲ್ಲಿ 2,021 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

639 ಸಖಿ ಮತಗಟ್ಟೆ, 39 ಎಥ್ನಿಕ್ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ. ಮತದಾನ ಪಾರದರ್ಶಕ ನಡೆಯಲು ಬೇಕಾದ ಎಲ್ಲ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ವ್ಯಾಪಕ ಭದ್ರತಾ ವ್ಯವಸ್ಥೆ, ಮತದಾನಕ್ಕೆ ಸಂಬಂಧಿಸಿದ ಪರಿಕರಗಳನ್ನು ಜಿಪಿಎಸ್ ತಂತ್ರಜ್ಞಾನ ಅಳವಡಿಸಿರುವ ವಾಹನಗಳಲ್ಲಿ ಸಾಗಣೆ ಮಾಡಲಾಗುತ್ತದೆ. ಮತದಾರರಿಗೆ ಯಾವುದೇ ಅಡ್ಡಿ ಆತಂಕವಿಲ್ಲದ ವಾತಾವರಣ ಸೃಷ್ಟಿಸಲು ಎಲ್ಲ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಚುನಾವಣಾಧಿಕಾರಿ ಮಾಹಿತಿ ನೀಡಿದರು.

ಮತಗಟ್ಟೆಗಳಲ್ಲಿ ಸೌಲಭ್ಯಗಳು:
-ರ್ಯಾಂಪ್ ಸೌಲಭ್ಯ
-ವಿದ್ಯುತ್ ಸೌಕರ್ಯ
-ಕುಡಿಯುವ ನೀರು
-ಪೀಠೋಪಕರಣ
-ಕಾಯುವ ಕೊಠಡಿ
-ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕ ಶೌಚಾಲಯ

ಇವಿಎಂ/ವಿ.ವಿ.ಪ್ಯಾಟ್‌ಗಳು:
ಇವಿಎಂ(ಎಂ-2)
ಬ್ಯಾಲೆಟ್ ಯೂನಿಟ್ -82,505
ಕಂಟ್ರೋಲ್ ಯೂನಿಟ್-68,280
ವಿ.ವಿ.ಪ್ಯಾಟ್-73,970
ಇವಿಎಂ(ಎಂ-3)
ಬ್ಯಾಲೆಟ್ ಯೂನಿಟ್-3045
ಕಂಟ್ರೋಲ್ ಯೂನಿಟ್-2520
ವಿ.ವಿ.ಪ್ಯಾಟ್-2730

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News