×
Ad

ಮಾಜಿ ಸಚಿವ ಚಿಂಚನಸೂರ್ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ

Update: 2019-04-08 22:07 IST

ಬೆಂಗಳೂರು, ಎ.8: ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ವಿರುದ್ಧ ಎನ್‌ಬಿಡಬ್ಲೂ ಜಾರಿ ಮಾಡಿ ಜನಪ್ರತಿನಿಧಿಗಳ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ.

ಚೆಕ್ ಬೌನ್ಸ್ ಆರೋಪ ಪ್ರಕರಣದಲ್ಲಿ ಚಿಂಚನಸೂರ್ ವಿರುದ್ಧ ಅಂಜನಾ ಶಾಂತವೀರ್ ಚಿಂಚನಸೂರ್ ದೂರು ದಾಖಲಿಸಿದ್ದರು. ಈ ವಿಚಾರ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಅನೇಕ ಬಾರಿ ನೋಟಿಸ್ ನೀಡಿದ್ದರೂ ಚಿಂಚನಸೂರ್ ವಿಚಾರಣೆಗೆ ಗೈರು ಹಾಜರಾಗಿದ್ದರು.

ಈ ಹಿನ್ನೆಲೆಯಲ್ಲಿ ನ್ಯಾಯಾಧೀಶ ರಾಮಚಂದ್ರ ಡಿ. ಹುದ್ದಾರ ಅವರಿದ್ದ ನ್ಯಾಯಪೀಠ ಚಿಂಚನಸೂರ್ ಅವರನ್ನು ಬಂಧಿಸಿ ಮೇ 2ರಂದು ಕೋರ್ಟ್‌ಗೆ ಹಾಜರುಪಡಿಸುವಂತೆ ಪೊಲಿೀಸರಿಗೆ ಸೂಚಿಸಿ ಆದೇಶ ಹೊರಡಿಸಿದೆ.

ಚೆಕ್‌ಬೌನ್ಸ್ ಪ್ರಕರಣದಲ್ಲಿ ಆರೋಪಿಯಾಗಿರುವ ಬಾಬುರಾವ್ ಚಿಂಚನಸೂರ್ ವಿರುದ್ಧ ಅಂಜನಾ ಶಾಂತವೀರ್ ಚಿಂಚನಸೂರ್ ಅವರು ದೂರು ದಾಖಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News