ಲಂಡನ್: ವಾಹನಗಳ ಮಾಲಿನ್ಯ ದರದಲ್ಲಿ ಹೆಚ್ಚಳ

Update: 2019-04-08 18:06 GMT

ಲಂಡನ್,ಎ. 8: ಬ್ರಿಟನ್ ರಾಜಧಾನಿ ಲಂಡನ್‌ನ ಹೆಚ್ಚುತ್ತಿರುವ ಪರಿಸರ ಮಾಲಿನ್ಯವನ್ನು ನಿಭಾಯಿಸುವುದಕ್ಕಾಗಿ ಸಾರಿಗೆ ಅಧಿಕಾರಿಗಳು ನಿರ್ಬಂಧಕ ಕ್ರಮವೊಂದನ್ನು ಈಗಾಗಲೇ ಜಾರಿಗೆ ತಂದಿದ್ದಾರೆ. ಮಧ್ಯ ಲಂಡನ್‌ನಲ್ಲಿ ‘ಅತಿ ಕಡಿಮೆ ಹೊಗೆ ವಲಯ’ವೊಂದನ್ನು ನಿರ್ಮಿಸಿರುವ ಅವರು, ಅಲ್ಲಿಗೆ ಪ್ರವೇಶಿಸಬೇಕಾದರೆ ನಿರ್ದಿಷ್ಟ ಶುಲ್ಕವನ್ನು ವಸೂಲು ಮಾಡುತ್ತಿದ್ದಾರೆ.ಈಗ, ಸೋಮವಾರದಿಂದ ಈ ಶುಲ್ಕವನ್ನು ಇನ್ನಷ್ಟು ಹೆಚ್ಚಿಸಲು ಹಾಗೂ ದಿನದ 24 ಗಂಟೆಯೂ ಶುಲ್ಕ ವಸೂಲು ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ.

ಹೊಸ ನಿಯಮಗಳ ಪ್ರಕಾರ, ಈ ವಲಯವನ್ನು ಪ್ರವೇಶಿಸುವ ಒಂದು ಕಾರು ದಿನಕ್ಕೆ 24 ಪೌಂಡ್ (ಸುಮಾರು 2,180 ರೂಪಾಯಿ) ಪಾವತಿಸಬೇಕಾಗುತ್ತದೆ. ಲಾರಿ ಮತ್ತು ಬಸ್ ಸೇರಿದಂತೆ ಘನವಾಹನಗಳು ದಿನಕ್ಕೆ 100 ಪೌಂಡ್ (ಸುಮಾರು 9084 ರೂಪಾಯಿ) ಪಾವತಿಸಬೇಕಾಗುತ್ತದೆ.ಲಂಡನ್‌ನಲ್ಲಿ 2,40,000 ಮಕ್ಕಳು ಸೇರಿದಂತೆ ಸುಮಾರು 6 ಲಕ್ಷ ಮಂದಿ ಅಸ್ತಮದಿಂದ ಬಳಲುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News