ಮೋದಿ ಮತ್ತೊಮ್ಮೆ ಪ್ರಧಾನಿಯಾಗಬಾರದು: ವೀರಪ್ಪ ಮೊಯ್ಲಿ

Update: 2019-04-10 11:54 GMT

ಬಾಗೇಪಲ್ಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ 5 ವರ್ಷಗಳ ಆಡಳಿತದಲ್ಲಿ ಭಾರತದ ಗಡಿಭಾಗದ ಜನರ ಜೀವನ ಅತ್ಯಂತ ಭಯಭೀತವಾಗಿದೆ ಎಂದು ಸಂಸದ ಡಾ.ಎಂ.ವೀರಪ್ಪ ಮೊಯ್ಲಿ ತಿಳಿಸಿದ್ದಾರೆ.

ತಾಲ್ಲೂಕಿನ ಮಿಟ್ಟೇಮರಿ ಹೋಬಳಿ ಜೂಲಪಾಳ್ಯ ಗ್ರಾಮದ ಬಳಿ ಏರ್ಪಡಿಸಿದ್ದ ಸಿಪಿಎಂ ಪಕ್ಷದ ಮುಖಂಡರು ಮತ್ತು ಸಾವಿರಾರು ಕಾರ್ಯಕರ್ತರ  ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಾಜಿ ಪ್ರಧಾನಿ ಡಾ.ಮನಮೋಹನ್‍ಸಿಂಗ್ ಅವರು 10 ವರ್ಷಗಳು ಆಡಳಿತ ನಡೆಸಿದರೂ ಪಾಕಿಸ್ತಾನದ ಗಡಿಭಾಗದಲ್ಲಿ ಸೈನಿಕರು ಜನರು ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದರು. ಆದರೆ ಮೋದಿ ಅವರ 5 ವರ್ಷಗಳ ಆಡಳಿತದಲ್ಲಿ ಸಾವಿರಾರು ಸಾರ್ವಜನಿಕರು ಮತ್ತು ನೂರಾರು ಸೈನಿಕರು ಬಲಿಯಾಗಿದ್ದಾರೆ ಎಂದರು. 

ಇವರ ಭರವಸೆಗಳಲ್ಲಿ ಒಂದಾದ ನದಿ ಜೋಡನೆ ಮಾಡಿ ದೇಶದ ಪ್ರತಿಯೊಬ್ಬರಿಗೂ ಶುದ್ದ ಕುಡಿಯುವ ನೀರನ್ನು ಕೊಡುತ್ತೇನೆ ಎಂದು ಹೇಳಿದ್ದರು, ಆದರೆ ಇದುವರೆಗೂ ನದಿ ಜೋಡನೆ ಮಾಡದೆ ಜನರನ್ನು ವಂಚನೆ ಮಾಡಿ ಮತ್ತೊಮ್ಮೆ ಪ್ರಧಾನಿಯಾಗಲು ಹೊರಟಿದ್ದಾರೆ. ನನ್ನ ಸಾಧನೆ ಇಡೀ ದೇಶಕ್ಕೆ ಗೊತ್ತಿದೆ ಆದರೆ ಬಿಜೆಪಿ ಅಭ್ಯರ್ಥಿ ಬಚ್ಚೇಗೌಡ ಈ ಕ್ಷೇತ್ರಕ್ಕೆ ಕೊಡುಗೆ ಏನು? ಮಾತೆತ್ತಿದರೆ ಮೊಯ್ಲಿ ಸುಳ್ಳು ಹೇಳುತ್ತಾರೆ, ನನಗೆ ಮತ ಹಾಕಬೇಡಿ ಮೋದಿಗೆ ಮತ ಹಾಕಿ ಎಂದು ಪ್ರಚಾರ ಮಾಡುತ್ತಿದ್ದಾರೆ ಅಂದರೆ ಯೋಗ್ಯತೆ ಏನು ಎಂಬುದು ಜನರಿಗೆ ಈಗಾಗಲೇ ಗೊತ್ತಾಗಿದೆ. ಈ ಹಿನ್ನಲೆಯಲ್ಲಿ ನಾನು ಮತ್ತೊಮ್ಮೆ ಸಂಸದನಾದರೆ ಎತ್ತಿನ ಹೊಳೆ ನೀರು ತರುವವರಿಗೂ ವಿರಹಮಿಸುದಿಲ್ಲ ಎಂದರು.

ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾತನಾಡಿ ಪ್ರಧಾನಿ ಮೋದಿ ಅವರು ಡ್ರೆಸ್ ಕೋಡ್‍ಗೆ ನೀಡುವ ಆದ್ಯತೆ ಬಡಜನರಿಗೆ ನೀಡುವುದಿಲ್ಲ ಮಾತೆತ್ತಿದರೆ ದೇಶ ಪ್ರೇಮದ ಬಗ್ಗೆ ಮಾತನಾಡುತ್ತಾರೆ. ಇನ್ನಾರಿಗೂ ದೇಶ ಪ್ರೇಮವಿಲ್ಲವಾ? ಇವರು 5 ವರ್ಷ ಆಡಳಿತದಲ್ಲಿ ದೇಶವನ್ನು ಜಾತಿ ಧರ್ಮಗಳ ಹೆಸರಿನಲ್ಲಿ ಜನರನ್ನುನ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ರಾಜ್ಯ ಮದ್ಯಪಾನ ಸಂಯಮ ಮಂಡಳಿ ನಿರ್ದೇಶಕ ಟಿ.ಎನ್.ರವಿಚಂದ್ರಾ ರೆಡ್ಡಿ, ಜಿಪಂ ಸದಸ್ಯ ಬೂರಗಮಡಗು ನರಸಿಂಹಪ್ಪ, ತಾಪಂ ಅಧ್ಯಕ್ಷ ನರೇಂದ್ರ ಬಾಬು ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ವಿ.ಮಂಜುನಾಥ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ನರೇಂದ್ರ, ಅಮರನಾಥರೆಡ್ಡಿ, ರಾಮಚಂದ್ರರೆಡ್ಡಿ, ಶ್ರೀನಿವಾಸರೆಡ್ಡಿ, ಬಾಬುರೆಡ್ಡಿ, ಬಿ.ವಿ.ವೆಂಕಟರವಣ, ಸೋಮಶೇಖರ್, ಚಂಪಾ, ಗುಲನಾಜ್ ಬೇಗಂ, ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News