ಹನೂರು: ಮಹದೇಶ್ವರನಬೆಟ್ಟಕ್ಕೆ ಅನಿತಾ ಕುಮಾರಸ್ವಾಮಿ ಭೇಟಿ
Update: 2019-04-10 19:03 IST
ಹನೂರು: ಅನಿತಾ ಕುಮಾರಸ್ವಾಮಿಯವರು ಮಲೆ ಮಹದೇಶ್ವರನಬೆಟ್ಟಕ್ಕೆ ಭೇಟಿ ನೀಡಿ ಮಲೈಮಹದೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದರು.
ಅನಿತಾ ಕುಮಾರಸ್ವಾಮಿಯವರು ಹನೂರು ತಾಲೂಕಿನ ಮಲೆ ಮಹದೇಶ್ವರನ ಬೆಟ್ಟಕ್ಕೆ ಭೇಟಿ ನೀಡಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಗೆಲುವಿಗಾಗಿ ಮಾದಪ್ಪನ ಸನ್ನಿದಿಯಲ್ಲಿ ವಿಶೇಷ ಪೂಜೆ ಮಾಡಿಸಿ ದೇವರ ದರ್ಶನ ಪಡೆದರು.
ದೇವೆಗೌಡರವರ ಕುಟುಂಬ ಮೊದಲಿನಿಂದಲೂ ದೇವಸ್ಥಾನಗಳ ಭೇಟಿ ಮತ್ತು ವಿಶೇಷ ಪೂಜೆ ಮತ್ತು ಯಜ್ಞ ಯಾಗ ಮಾಡಿಸುವುದು ಹೊಸದೇನಲ್ಲಾ, ಅದರಲ್ಲೂ ಚುನಾವಣಾ ಸಂದರ್ಭದಲ್ಲಿ ಹೆಚ್ಚಾಗಿಯೇ ದೇವಸ್ಥಾನ ಮತ್ತು ಪೂಜಾ ಕೈಕರ್ಯಗಳಲ್ಲಿ ಭಾಗವಹಿಸುತ್ತಾರೆ.