ಪ್ರಜಾಪ್ರಭುತ್ವದ ಹೆಸರಿನಲ್ಲಿ ಸರ್ವಾಧಿಕಾರ, ದಬ್ಬಾಳಿಕೆ ನಡೆಯುತ್ತಿದೆ: ಮುಖ್ಯಮಂತ್ರಿ ಚಂದ್ರು

Update: 2019-04-11 17:26 GMT

ಮೈಸೂರು,ಎ.11:ಪ್ರಜಾಪ್ರಭುತ್ವ ದಾರಿತಪ್ಪುತ್ತಿದ್ದು ಪ್ರಜಾಪ್ರಭುತ್ವದ ಹೆಸರಿನಲ್ಲಿ ಸರ್ವಾಧಿಕಾರ ದಬ್ಬಾಳಿಕೆ ನಡೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುಖ್ಯಮಂತ್ರಿ ಚಂದ್ರು ವಾಗ್ದಾಳಿ ನಡೆಸಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸ್ವಾತಂತ್ರ್ಯ ನಂತರ ದೇಶವನ್ನು ಗಟ್ಟಿಯಾಗಿ ನಿಲ್ಲಿಸಿದ್ದೇ ಕಾಂಗ್ರೆಸ್, ಇಲ್ಲವಾದರೆ ತಾವೆಲ್ಲಿ ಪ್ರಧಾನಿಯಾಗುತ್ತಿದ್ದೀರಿ ಎಂದು ಪ್ರಶ್ನಿಸಿದರು. ನೆಹರೂ ಕಾಲದಲ್ಲಿ ಶೇ.7ರಷ್ಟಿದ್ದ ಸಾಕ್ಷರತೆಯನ್ನು ಶೇ.80ರಷ್ಟು ಏರಿಸಿದ್ದು ಯಾರು, ಮಾಹಿತಿ ಹಕ್ಕು, ಬಿಸಿಯೂಟ ಯೋಜನೆ, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಶನ್, 72 ಸಾವಿರ ಕೋಟಿ ರೈತರ ಸಾಲ ಮನ್ನಾ, ಇದೇ ಯೋಜನೆಗಳಿಗೆ ಸಂಸ್ಕೃತ ಪದಗಳನ್ನು ಸೇರಿಸಿ ಹೆಸರು ಬದಲಿಸಿ ತಮ್ಮ ಯೋಜನೆಯೆಂದು ಘೋಷಿಸಿಕೊಂಡಿದ್ದಾರೆ ಎಂದರು.0

ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಆಧಾರ್ ಕಾರ್ಡ್ ಯೋಜನೆ, ಜಿಎಸ್ ಟಿ ಬಗ್ಗೆ ತಕರಾರು ತೆಗೆದಿದ್ದ ಮೋದಿಯವರು ಈಗ ಅದನ್ನೇ ಸೂಕ್ತವಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗಿಲ್ಲ, ರೆಫೆಲ್ ಹಗರಣದಲ್ಲಿ ದೇಶದ ರಕ್ಷಣಾ ವಿಷಯ ಸೋರಿಕೆ, ಪೆಟ್ರೋಲ್ ತೆರಿಗೆಯಲ್ಲಿ ಬಂದ 11 ಸಾವಿರ ಕೋಟಿ ಹಣ ಎಲ್ಲಿ ಹೋಯಿತು, ಮೋದಿಯವರ ವಿದೇಶಿ ಪ್ರವಾಸಕ್ಕೆಂದು 2 ಸಾವಿರ ಕೋಟಿ ರೂ.ಗಳು ಖರ್ಚು ಮಾಡಿರುವುದೇ ಸಾಧನೆ, ಹಸಿ ಸುಳ್ಳಿನ ಮೂಲಕ ಬುಲೆಟ್ ಟ್ರೈನ್ ಬಿಡುತ್ತಾರೆ ಎಂದು ಲೇವಡಿ ಮಾಡಿದರು.

ಈ ಐದು ವರ್ಷದ ಅವಧಿಯಲ್ಲಿ ಅಯೋದ್ಯೆಯಲ್ಲೇಕೆ ರಾಮಮಂದಿರ ಕಟ್ಟಲಿಲ್ಲ? ಅದಕ್ಯಾರು ಅಡ್ಡಿಪಡಿಸಿದರು, ಈ ಭಾವಾನಾತ್ಮಕ ವಿಷಯನ್ನೇ ಚುನಾವಣಾ ಬಂಡವಾಳವನ್ನಾಗಿಸಿಕೊಳ್ಳುತ್ತಾರೆ, “ಓಟಿಗಾಗಿ ರಾಮ ಜನರಿಗೆ ನಾಮ”ಎಂದು ವ್ಯಂಗ್ಯವಾಡಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಸಿದ್ದರಾಮಯ್ಯನವರು ಮಾತನಾಡಿ ಪ್ರಬುದ್ಧ ಭಾರತ ಕಟ್ಟಲು ಹುಟ್ಟಿರುವ ಸಂವಿಧಾನವನ್ನೇ ಕಡೆಗಣಿಸಿದ್ದು ಪ್ರಜಾಪ್ರಭುತ್ವದ ಅಳಿವು ಉಳಿವಿನ ಸನ್ನಿವೇಶ ಎದುರಾಗಿದೆ ಎಂದು ಆತಂಕವ್ಯಕ್ತಿಪಡಿಸಿ, ಸಂವಿಧಾನ ಬದಲಾಯಿಸುವ ವ್ಯಕ್ತಿಗಳನ್ನೇ ಅಧಿಕಾರವಿದ್ದು ಮುಂದಿನ ದಿನಗಳಲ್ಲಿ ಮನು ಶಾಸ್ತ್ರ ಅನುಷ್ಠಾನಗೊಳಿಸುವುದೇ ಮೋದಿಯವರ ರಹಸ್ಯ ಕಾರ್ಯಸೂಚಿಯಾಗಿದೆ ಎಂದು ಟೀಕಿಸಿದರು.

ಭಾಷಾವಾರು ಪ್ರಾಂತ್ಯ ರಚನೆ ಹಾಗೂ ಬಹು ಭಾಷಾ ಸಂಸ್ಕೃತಿಗೆ ಧಕ್ಕೆಯಾಗಿದೆ, ವಲಸೆ ಅನುಪಾತದಲ್ಲಿ ವ್ಯತ್ಯಾಸವಾಗಿದೆ, ದೇಶದಲ್ಲಿ ಬಲವಂತವಾಗಿ ಹಿಂದಿಯನ್ನು ಹೇರಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಹಿಂದಿ ಬಲ್ಲವರೇ ದೇಶದ ನಿಜ ನಾಗರೀಕರು ಎಂಬ ವಾತಾವರಣ ಉಂಟಾಗುವುದು ಎಂದು ಆತಂಕ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಗತಿಪರರಾದ ಈ.ಶಿ.ರಾಮಚಂದ್ರೇಗೌಡ, ಪ್ರೊ.ರುದ್ರಪ್ಪ ಅನಗೂಡು, ಪ್ರೊ.ಕೆ.ಎಂ.ಜಯರಾಮಯ್ಯ, ಅರಕೇಶ್, ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News