ಹನೂರು : ಜೀಪು, ನಾಡ ಬಂದೂಕು ಬಿಟ್ಟು ಬೇಟೆಗಾರರು ಪರಾರಿ

Update: 2019-04-12 11:49 GMT

ಹನೂರು: ಜಿಂಕೆಯನ್ನು ಬೇಟೆಯಾಡಿ ಜೀಪಿನಲ್ಲಿ ಸಾಗಿಸಲಾಗುತ್ತಿದ್ದ 400 ಕೆಜಿ ಜಿಂಕೆ ಮಾಂಸವನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಕರ್ನಾಟಕದ ಗಡಿ ಹಾಗೂ ತಮಿಳುನಾಡು ವ್ಯಾಪ್ತಿಯ ಪಾಲಾರ್ ಅರಣ್ಯದಂಚಿನಲ್ಲಿರುವ ಈರೊಡ್ ಪ್ರದೇಶಲ್ಲಿ ಅರಣ್ಯಾಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ ಬೇಟೆಗಾರರು ಬರೋಬ್ಬರಿ 400 ಕೆಜಿ ಜಿಂಕೆ ಮಾಂಸ, ಜೀಪು, ನಾಡ ಬಂದೂಕು, ಉರುಳು, ಇನ್ನಿತರೆ ಆಯುಧಗಳನ್ನು ಬೇಟೆಗಾರರು ಬಿಟ್ಟು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ತಮಿಳುನಾಡಿಗೆ ಸೇರಿದ ಈರೋಡ್ ಅರಣ್ಯ ಪ್ರದೇಶದಲ್ಲಿ ಜಿಂಕೆಗಳನ್ನು ಬೇಟೆಯಾಡಿ, ಹನೂರು ತಾಲ್ಲೂಕಿನ ಪಾಲಾರ್ ನದಿಯಲ್ಲಿ ಮಾಂಸ ಕತ್ತರಿಸಿ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಕೊಂಡು ಜೀಪಿನಲ್ಲಿ ಸಾಗಣೆ ಮಾಡುತ್ತಿದ್ದ ಮಾಹಿತಿ ಪಡೆದುಕೊಂಡ ಮಲೆಮಹದೇಶ್ವರ ವಲಯದ  ವ್ಯಾಪ್ತಿಯ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿದ ಬಳಿಕ, ವಶಕ್ಕೆ ಪಡೆದ ಹಲವು ಸಾಮಗ್ರಿಗಳನು ತಮಿಳುನಾಡಿನ ಈರೋಡ್ ಅರಣ್ಯಾಧಿಕಾರಿಗಳಿಗೆ ಒಪ್ಪಿಸಲಾಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News