‘ವಿಶ್ವ ಪತ್ರಿಕಾ ಚಿತ್ರ’

Update: 2019-04-12 18:18 GMT

ಚಿಕ್ಕ ಬಾಲಕಿ ಮತ್ತು ಆಕೆಯ ತಾಯಿಯನ್ನು ಅಮೆರಿಕದ ಗಡಿ ಅಧಿಕಾರಿಗಳು ತಮ್ಮ ವಶಕ್ಕೆ ತೆಗೆದುಕೊಳ್ಳುವಾಗ ಬಾಲಕಿಯು ಅಸಹಾಯಕತೆಯಿಂದ ಅಳುತ್ತಿರುವ ಚಿತ್ರಕ್ಕೆ ಗುರುವಾರ ಪ್ರತಿಷ್ಠಿತ ‘ವಿಶ್ವ ಪತ್ರಿಕಾ ಚಿತ್ರ’ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಹೊಂಡುರಸ್ ದೇಶದ ಮಹಿಳೆ ಸಾಂಡ್ರಾ ಸ್ಯಾಂಚೆಝ್ ಮತ್ತು ಅವರ ಮಗಳು ಯನೆಲಾ ಕಳೆದ ವರ್ಷ ಅಕ್ರಮವಾಗಿ ಅಮೆರಿಕ-ಮೆಕ್ಸಿಕೊ ಗಡಿ ದಾಟುವಾಗ ‘ಗೆಟ್ಟಿ’ ಸಂಸ್ಥೆಯ ಹಿರಿಯ ಛಾಯಾಚಿತ್ರಕಾರ ಜಾನ್ ಮೂರ್ ಈ ಚಿತ್ರ ತೆಗೆದಿದ್ದರು. ಈ ಚಿತ್ರವು ವಿಭಿನ್ನ ರೀತಿಯ ಹಿಂಸೆ, ಅಂದರೆ ಮಾನಸಿಕ ಹಿಂಸೆಯನ್ನು ತೆರೆದಿಟ್ಟಿದೆ ಎಂಬುದಾಗಿ ತೀರ್ಪುಗಾರರು ಅಭಿಪ್ರಾಯಪಟ್ಟಿದ್ದಾರೆ. ಅಳುತ್ತಿರುವ ಚಿಕ್ಕ ಬಾಲಕಿಯ ಚಿತ್ರವು ವಿಶ್ವವ್ಯಾಪಿ ಸುದ್ದಿಯಾಗಿತ್ತು ಹಾಗೂ ಸಾವಿರಾರು ವಲಸಿಗರನ್ನು ಅವರ ಮಕ್ಕಳಿಂದ ದೂರ ಮಾಡುವ ಅಮೆರಿಕದ ವಿವಾದಾಸ್ಪದ ನೀತಿಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor