ಭಾರತ-ಅಮೆರಿಕ ವಾಣಿಜ್ಯ ಸಂಘರ್ಷ: ಸೆನೆಟರ್‌ಗಳ ಕಳವಳ

Update: 2019-04-13 17:41 GMT

ವಾಶಿಂಗ್ಟನ್, ಎ. 13: ಭಾರತದಿಂದ ಮಾಡಲಾಗುತ್ತಿರುವ ಸುಂಕರಹಿಆಮದುಗಳನ್ನು ಕೊನೆಗೊಳಿಸುವಅಮೆರಿಕದ ಯೋಜನೆಯಿಂದಾಗಿ ಅಮೆರಿಕದ ಬಳಕೆದಾರರ ಜೀವನ ವೆಚ್ಚ ಏರಬಹುದು ಎಂಬ ಭೀತಿಯನ್ನುಅಮೆರಿಕದ ಇಬ್ಬರು ಸೆನೆಟರ್‌ಗಳು ತಮ್ಮ ದೇಶದ ವಾಣಿಜ್ಯ ಕಚೇರಿಗೆ ವ್ಯಕ್ತಪಡಿಸಿದ್ದಾರೆ.

ಈ ಯೋಜನೆಯ ಅನುಷ್ಠಾನವನ್ನು ವಿಳಂಬಗೊಳಿಸುವಂತೆ ಹಾಗೂ ಹೆಚ್ಚಿನ ಮಾತುಕತೆಗಳನ್ನು ನಡೆಸುವಂತೆ ಅವರು ಒತ್ತಾಯಿಸಿದ್ದಾರೆ.

ಭಾರತಕ್ಕಾಗಿನ ಜನರಲೈಸ್ಡ್ ಸಿಸ್ಟಮ್ ಆಫ್ ಪ್ರಿಫರೆನ್ಸಸ್ (ಜಿಎಸ್‌ಪಿ)ನ್ನು ಕೊನೆಗೊಳಿಸುವ ತನ್ನ ಯೋಜನೆಯೊಂದಿಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದೆ ಸಾಗಿದರೆ, ಈ ಸ್ಥಾನಮಾನವನ್ನು ತಾನು ಮೇ ತಿಂಗಳಆದಿ ಭಾಗದಲ್ಲಿ ಕಳೆದುಕೊಳ್ಳಬಹುದು ಎಂದು ಭಾರತದ ಅಧಿಕಾರಿಗಳು ಹೇಳಿದ್ದಾರೆ. ಇದಕ್ಕೆ ಪ್ರತೀಕಾರಾತ್ಮಕಕ್ರಮಗಳನ್ನು ಭಾರತ ತೆಗೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News