ಬಿಎಸ್‍ವೈ ಮೇಲೆ ಐಟಿ ಕ್ರಮ ಏಕಿಲ್ಲ: ಪ್ರೊ.ರವಿವರ್ಮಕುಮಾರ್ ಪ್ರಶ್ನೆ

Update: 2019-04-13 17:51 GMT

ತುಮಕೂರು.ಎ.13: ಬಿಜೆಪಿ ಪಕ್ಷದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಆಪರೇಷನ್ ಕಮಲ ಮಾಡುತ್ತಿರುವಾಗ ಐಟಿ ಅಧಿಕಾರಿಗಳು ದಾಳಿ ಮಾಡಲಿಲ್ಲ. ನನ್ನದೇ ಆಡಿಯೋ ಎಂದು ಯಡಿಯೂರಪ್ಪ ಅವರು ಹೇಳಿದರೂ ಅವರ ವಿರುದ್ಧ ಯಾಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಸುಪ್ರೀಂ ಕೋರ್ಟ್ ನ ಹಿರಿಯ ವಕೀಲ ಪ್ರೊ.ರವಿವರ್ಮಕುಮಾರ್ ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ಘೋಷಣೆ ಭಾರತ ಸರ್ಕಾರ ಎಂದಲ್ಲ. ಬಿಜೆಪಿ ಸರ್ಕಾರ ಎಂದಾಗಿದೆ. ಆದಿತ್ಯನಾಥ್ ಅವರು ಭಾರತದ ಸೈನ್ಯವನ್ನು ಮೋದಿ ಸೈನ್ಯ ಎಂದು ಕರೆದರು, ಇದಕ್ಕೆ ಭಾರತ ಸರ್ಕಾರವಾಗಲಿ, ವಾಯು ಸೇನೆ, ಭೂಸೇನೆ ಆಗಲಿ ಯಾವ ಮಾತುಗಳನ್ನು ಆಡಲಿಲ್ಲ. ಯಾರು ಕೂಡ ಮೋದಿ ಸರ್ಕಾರದ ವಿರುದ್ಧ ಧ್ವನಿ ಎತ್ತದಂತಹ ಸನ್ನಿವೇಶವನ್ನು ಇಂದು ಭಾರತದಲ್ಲಿ ಸೃಷ್ಟಿ ಮಾಡಲಾಗಿದ ಎಂದು ಕಿಡಿ ಕಾರಿದರು.

ಆದಾಯ ತೆರಿಗೆ ಅಧಿಕಾರಿಗಳ ಮನೆ ಮೇಲೆ ಐಟಿ ರೇಡ್ ಮಾಡಲಾಗುತ್ತಿದೆ. ಆದರೆ ಯಡಿಯೂರಪ್ಪ ಆಪರೇಷನ್ ಕಮಲ ಮಾಡು ವಾಗ ಐಐಟಿ ಅಧಿಕಾರಿಗಳಿಗೆ ಯಡಿಯೂರಪ್ಪ ಕಾಣಲಿಲ್ಲವೇ. ನನ್ನದೇ ಆಡಿಯೋ ಎಂದು ಹೇಳಿಕೆ ಕೊಟ್ಟಾಗ ಐಟಿ ಅಧಿಕಾರಿಗಳು ಕ್ರಮ ಜರುಗಿಸಲಿಲ್ಲ ಏಕೆ ಎಂದು ಪ್ರಶ್ನಿಸಿದರು.

ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಿ. ಪ್ರಜ್ಞಾವಂತರಾಗಿ. ಸಂವಿಧಾನದ ಪರ ಮತ ನೀಡಿ ಕೋಮುವಾದ ಶಕ್ತಿಯನ್ನು ಸೋಲಿಸಲು ಮತದಾನ ಮಾಡಿ ಎಂದ ಅವರು, ಮೋದಿಯವರು ಕಾನೂನು ಬಾಹಿರ ಚಟುವಟಿಕೆಗಳನ್ನು ಅವ್ಯವಹಾರಗಳನ್ನು ದೇಶದ ಅರಾಜಕತೆಯನ್ನು ಮಾಡಿದ್ದಾರೆ. ಹಾಗಾಗಿ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕು ಎಂದರು.

ಇದೇ ವೇಳೆ ವಿವಿಧತೆಯಲ್ಲಿ ಏಕತೆ ಸಾರ್ ಅದಕ್ಕಾಗಿ ಬದಲಾಗಿರುವ ಸಾಮಾಜಿಕ ನ್ಯಾಯ ಪ್ರತಿಪಾದಿಸುವ ಸಂವಿಧಾನವನ್ನು ಎತ್ತಿಹಿಡಿಯುವ ರೈತಾಪಿ ಸಮುದಾಯಕ್ಕೆ ಸ್ಪಂದಿಸಲು ಬದ್ಧರಾಗಿರುವ ವಿವಿಧ ಎಡಪಂಥೀಯ ಪಕ್ಷಗಳ ಅಭ್ಯರ್ಥಿಗಳನ್ನು ಬೆಂಬಲಿಸಿ ಗೆಲ್ಲಿಸಬೇಕು ಎಂಬ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು

ಸುದ್ದಿಗೋಷ್ಠಿಯಲ್ಲಿ ಜಾತ್ಯಾತೀತ ಯುವ ವೇದಿಕೆಯ ಮಾರುತಿಪ್ರಸಾದ್, ವಿರುಪಾಕ್ಷ ಡ್ಯಾಗೇರಹಳ್ಳಿ, ಉದ್ಯಮಿ ಡಿ.ಟಿ.ವೆಂಕಟೇಶ್ ಸೇರಿದಂತೆ ಇತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News