ಪಿಯು ಫಲಿತಾಂಶ: ದಾವಣಗೆರೆ ಜಿಲ್ಲೆಗೆ 22ನೇ ಸ್ಥಾನ

Update: 2019-04-15 12:38 GMT

ದಾವಣಗೆರೆ,ಎ.15: ಜಿಲ್ಲೆಯು ದ್ವಿತೀಯ ಪಿಯುಸಿಯಲ್ಲಿ ಶೇ 62.53 ಫಲಿತಾಂಶದೊಂದಿಗೆ ರಾಜ್ಯಕ್ಕೆ 22ನೇ ಸ್ಥಾನ ಪಡೆದಿದ್ದು, ಕಳೆದ ವರ್ಷ ಶೇ 63.29 ಫಲಿತಾಂಶದೊಂದಿಗೆ ರಾಜ್ಯಕ್ಕೆ 23 ನೇ ಸ್ಥಾನ ಪಡೆದಿತ್ತು. ಈ ಬಾರಿ ಒಂದು ಸ್ಥಾನ ಏರಿಕೆಯಾಗಿದ್ದರೂ ಒಟ್ಟಾರೆ ಫಲಿತಾಂಶದಲ್ಲಿ ಶೇ 0.76 ಇಳಿಕೆ ಕಂಡಿದೆ. 

2017 ನೇ ಸಾಲಿಗಿಂತಲೂ 2018 ನೇ ಸಾಲಿನಲ್ಲಿ ಫಲಿತಾಂಶವು ಶೇ 10.91 ರಷ್ಟು ಹೆಚ್ಚಾಗಿತ್ತು, ಅದರೆ, ಈ ಬಾರಿ ಅಲ್ಪ ಪ್ರಮಾಣದಲ್ಲಿ ಕುಸಿದಿದೆ. 
ರಾಜ್ಯದ ಸರಾಸರಿ ಫಲಿತಾಂಶದಲ್ಲಿ ಶೇ 61.73 ಆಗಿದ್ದು, ದಾವಣಗೆರೆ ಜಿಲ್ಲೆಯು ರಾಜ್ಯದ ಸರಾಸರಿಗಿಂತಲೂ ಶೇ 0.8 ಹೆಚ್ಚು ಫಲಿತಾಂಶ ಪಡೆದಿದೆ. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 22,362 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಇದರಲ್ಲಿ 18,862 ಹೊಸ ವಿದ್ಯಾರ್ಥಿಗಳು, 2,990 ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ 210 ಬಾಹ್ಯ ವಿದ್ಯಾರ್ಥಿಗಳು ಇದ್ದಾರೆ. 

ಕನ್ನಡ ಮಾಧ್ಯಮದಲ್ಲಿ 11,116 ವಿದ್ಯಾರ್ಥಿಗಳು ಹಾಗೂ ಇಂಗ್ಲಿಷ್ ಮಾಧ್ಯಮದಲ್ಲಿ 11,246 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. 10,953 ವಿದ್ಯಾರ್ಥಿಗಳು, 11,409 ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದರು. ಕಲಾ ವಿಭಾಗದಲ್ಲಿ 7,733 ವಿದ್ಯಾರ್ಥಿಗಳು, ವಿಜ್ಞಾನ ವಿಭಾಗದಲ್ಲಿ 8,786 ವಿದ್ಯಾರ್ಥಿಗಳು ಹಾಗೂ ವಾಣಿಜ್ಯ ವಿಭಾಗದಲ್ಲಿ 5843 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News