ದ್ವಿತೀಯ ಪಿಯುಸಿ ಫಲಿತಾಂಶ: 9ನೇ ಸ್ಥಾನಕ್ಕೆ ಕುಸಿದ ಶಿವಮೊಗ್ಗ ಜಿಲ್ಲೆ

Update: 2019-04-15 13:26 GMT

ಶಿವಮೊಗ್ಗ,ಎ.15: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಕಳೆದ ವರ್ಷ 5 ನೇ ಸ್ಥಾನ ಪಡೆದು ಮುನ್ನಡೆ ಕಾಯ್ದುಕೊಂಡಿದ್ದ ಶಿವಮೊಗ್ಗ ಜಿಲ್ಲೆಯು, ಪ್ರಸ್ತುತ 9ನೇ ಸ್ಥಾನಕ್ಕೆ ಕುಸಿದು ಹಿನ್ನಡೆ ಸಾಧಿಸಿದೆ. ಜಿಲ್ಲೆಗೆ ಈ ಬಾರಿ ಶೇ. 73.54 ರಷ್ಟು ಫಲಿತಾಂಶ ಬಂದಿದೆ. 

ತೇರ್ಗಡೆಗೊಂಡವರಲ್ಲಿ ಬಾಲಕರಿಗೆ ಹೋಲಿಸಿದರೆ, ಬಾಲಕಿಯರ ಸಂಖ್ಯೆಯೇ ಹೆಚ್ಚಿದೆ. ಪ್ರಸ್ತುತ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲೆಯಿಂದ ಒಟ್ಟಾರೆ 18,582 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. ಇದರಲ್ಲಿ 12,561 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಇದರಲ್ಲಿ 8204 ಮಂದಿ ಬಾಲಕರು ಹಾಗೂ 10,978 ಬಾಲಕಿಯರಾಗಿದ್ದಾರೆ. ಕಲಾ ವಿಭಾಗದಲ್ಲಿ ಶೇ. 60.28, ವಾಣಿಜ್ಯ ವಿಭಾಗದಲ್ಲಿ ಶೇ. 71.24, ವಿಜ್ಞಾನ ವಿಭಾಗದಲ್ಲಿ ಶೇ. 69.58 ಫಲಿತಾಂಶ ಬಂದಿದೆ. 

ವಿವಿಧ ಕಾಲೇಜುಗಳ ಹಾಗೂ ತಾಲೂಕುವಾರು ಫಲಿತಾಂಶದ ವಿವರಗಳು ಇನ್ನಷ್ಟೆ ಲಭ್ಯವಾಗಬೇಕಾಗಿದೆ. ಮಂಗಳವಾರ ಪೂರ್ಣ ಪ್ರಮಾಣದ ಮಾಹಿತಿ ಸಿಗಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ. 

ಅಧಿಕ ಅಂಕ ಪಡೆದವರು: ಶಿವಮೊಗ್ಗದ ವಿಕಾಸ ಕಾಲೇಜ್‍ನ ಸಾತ್ವಿಕ್ ಹೆಗ್ಡೆಯವರು ವಿಜ್ಞಾನ ವಿಭಾಗದಲ್ಲಿ 591, ವಾಣಿಜ್ಯ ವಿಭಾಗದಲ್ಲಿ ಅದೇ ಕಾಲೇಜ್‍ನ ಶಬರೀಶ್ 592, ಆದಿಚುಂಚನಗಿರಿ ಕಾಲೇಜ್‍ನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ರುಚಿತಾ ಎ.ಆರ್.ರವರು 589 ಹಾಗೂ ವಿಸ್ಮಿತಾ ಡಿ. ರವರು 589 ಅಂಕಗಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News